ಡಾ.ಯು.ಪಿ.ಉಪಾಧ್ಯಾಯ ದಂಪತಿಗಳಿಗೆ ಅಭಿನಂದನೆ; ಒಪ್ಪರಿಗೆ ಬಿಡುಗಡೆ

ಉಡುಪಿ: ತುಳು ನಿಘಂಟಿನ ಜೋಡಿ ಕರಾವಳಿ ಕಂಡ ಅಪೂರ್ವ ದಂಪತಿಗಳಾದ ಉಪಾಧ್ಯಾಯ ದಂಪತಿಗಳನ್ನು ಗೋವಿಂದ ಪೈ ಸಂಶೋಧನ ಕೇಂದ್ರ, ಮೊಗಸಾಲೆ ಪ್ರತಿಷ್ಠಾನ, ಕಾಂತಾವರ ಕನ್ನಡ ಸಂಘ, ಮಣಿಪಾಲ ಅಕಾಡೆಮಿ ಆಶ್ರಯದಲ್ಲಿ ಗುರುವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಡಾ|ಯು.ಪಿ.ಉಪಾಧ್ಯಾಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ್‌ ರೈ ಮಾತನಾಡಿ ಭಾರತದಲ್ಲಿರುವ ಬೆರಳೆಣಿಕೆಯ ಅಂತಾರಾಷ್ಟ್ರೀಯ ಮಟ್ಟದ ಭಾಷಾ ವಿಜ್ಞಾನಿಗಳಲ್ಲಿ ಡಾ|ಯು.ಪಿ.ಉಪಾಧ್ಯಾಯ ಒಬ್ಬರು. ಇವರ ಕೃತಿಗಳನ್ನು ಕಂಡರೆ ಮಾತ್ರ ಇದು ಅರ್ಥವಾಗುತ್ತದೆ. ಬುದ್ಧಿವಂತಿಕೆ ಬೇರೆಯವರಿಗೆ ಇರಬಹುದು. ಆದರೆ ಇವರ ವಿನಯ, ಸಜ್ಜನಿಕೆ ವಿದ್ವತ್‌ ವಲಯಕ್ಕೆ ಆದರ್ಶಪ್ರಾಯ ಎಂದು ಹಿರಿಯ ವಿದ್ವಾಂಸ. ನಾವು ಕಂಡದ್ದು ಸ್ವಲ್ಪ ಮಾತ್ರ. ಅವರ ಮಟ್ಟ ದೊಡ್ಡದು. ಆದರೆ ಎಂದೂ ಅಹಂ ಇಟ್ಟುಕೊಂಡವರಲ್ಲ ಎಂದರು.
     ಸುಖ ದು:ಖವನ್ನು ಸಮಾನಾಗಿ ಸ್ವೀಕರಿಸಿದ್ದೇನೆ. ವಿಚಲರಾಗುವುದಿಲ್ಲವೋ ಅಂತದ್ದನ್ನು ನಾವು ಪಾಲಿಸುತ್ತೇವೆ ಎಂದು ಡಾ.ಯು.ಪಿ.ಉಪಾಧ್ಯಾಯ ಅವರು ಗೌರವ ಸ್ವೀಕರಿಸಿ ಉತ್ತರಿಸುತ್ತಾ ಹೇಳಿದರು. ಪೂರ್ವ ತಯಾರಿಯೊಂದಿಗೆ ತರಗತಿ ಮಾಡಿದರೆ ಕ್ರೈಸ್ತ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸಾಧನೆ ಮಾಡುವುದು ಸುಲಭ ಸಾಧ್ಯ ಎಂದು ಅವರು ನೆನಪಿಸಿಕೊಂಡರು.
   ತುಳು ಇರುವವರೆಗೆ ಉಪಾಧ್ಯಾಯ ದಂಪತಿಗಳು ನಮ್ಮ ನಡುವೆ ಇರುತ್ತಾರೆ ಎಂದು ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಅವರು ಹೇಳಿದರು.
   ನಿಡಂಬೂರು ಬಿ. ಬಳ್ಳಾಲ, , ಮಲ್ಲೇಪುರಂ.ಜಿ ವೆಂಕಟೇಶ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅವರ ಸಾಧನೆಯನ್ನು ಪ್ರಶಂಸಿದರು.
  ಪಾದೆಕಲ್ಲು ವಿಷ್ಣು ಭಟ್ಟ ಅವರು ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಪ್ರಾಂಶುಪಾಲ ಹಾ.ಲಾ.ನಾಯಕ್ , ಹೇರಂಜೆ ಕೃಷ್ಣ ಭಟ್ ಅವರು ಉಪಸ್ಥಿರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com