ಕೋಟೇಶ್ವರ: ಸಂಭ್ರಮದ ದೀಪೋತ್ಸವ

ಕೋಟೇಶ್ವರ: ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ದೀಪೋತ್ಸವ ಇತ್ತಿಚಿಗೆ ಜರುಗಿತು.
      ದೇವಳದಲ್ಲಿ ರಂಗಪೂಜೆಯ ನಂತರ ಹೊರಬೀದಿಯಲ್ಲಿ ಸಣ್ಣ ರಥೋತ್ಸವ ಹಾಗೂ ಮುಖ್ಯ ರಥಬೀದಿಯಲ್ಲಿ ದೀಪೋತ್ಸವವು ಜರುಗಿತು.
       ಬಸವನಗುಡಿಗೆ ದೇವರ ಉತ್ಸವಮೂರ್ತಿ ತೆರಳಿದ ನಂತರ ಕೋಟಿತೀರ್ಥದಲ್ಲಿ ಕೆರೆಯ ದೀಪೋತ್ಸವ ಹಾಗೂ ತೆಪೊತ್ಸವ ಜರುಗಿತು. ವಿಶಾಲವಾದ ಕೋಟಿತೀರ್ಥದ ಮೆಟ್ಟಿಲುಗಳಲ್ಲಿ ಹಣತೆ ದೀಪ ಪ್ರಜ್ವಲಿಸಿದಾಗ ನೆರೆದ ಭಕ್ತರು ಪುಳಕಿತರಾದರು. ಸುಡುಮದ್ದುಗಳ ಪ್ರದರ್ಶನ ಜನಾಕರ್ಷಣೀಯವಾಗಿತ್ತು. ಸಾಂಸðತಿಕ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮದ ಮಕ್ಕಳ ಮೇಳ ತಂಡದಿಂದ 'ವೀರ ವೃಷಸೇನ' ಯಕ್ಷಗಾನ ಪ್ರದರ್ಶನ ನಡೆಯಿತು.
      ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಮ್‌. ಪ್ರಭಾಕರ ಶೆಟ್ಟಿ, ಸದಸ್ಯರಾದ ಬಿ.ಎಮ್‌. ಗುರುರಾಜ್‌ರಾವ್‌, ಶ್ರೀನಿವಾಸ ಕುಂದರ್‌, ವಿನೋದ್‌ ಶೇಟ್‌, ಗೋಪಾಲ ಬೀಜಾಡಿ, ಕುಸುಮ ದೇವಾಡಿಗ, ವನಜ ಪೂಜಾರಿ, ಪ್ರಧಾನ ಅರ್ಚಕ ಪ್ರಸನ್ನ ಕುಮಾರ್‌ ಐತಾಳ್‌ ನೇತƒತ್ವದಲ್ಲಿ ದೀಪೋತ್ಸವ ಜರುಗಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com