ಯುವ ಕಲಾವಿದರನ್ನು ಗುರುತಿಸಿ, ಸನ್ಮಾನಿಸಿ; ಉದಯಕುಮಾರ್ ಶೆಟ್ಟಿ

ಕಾರ್ಕಳ: ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ಕೇವಲ ಖ್ಯಾತಮಾನ ಕಲಾವಿದರನ್ನೇ ಪದೆ ಪದೆ ಸನ್ಮಾನಿಸುವ ಬದಲು ಉದಯೋನ್ಮುಖ ಯುವ ಕಲಾವಿದರನ್ನು ಗೌರವಿಸುವುದು ಸೂಕ್ತ ಎಂದು ಮಣಿಪಾಲ ಎಂ.ಐ.ಟಿ. ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಬೊಳೆಂತಡ್ಕ ಪೈ ಕುಟುಂಬದವರು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಸಾಲಿಗ್ರಾಮ ಮೇಳದ ಬಯಲಾಟ ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಉದಯೋನ್ಮುಖ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.
 ಯಕ್ಷಗಾನ ಕಲೆಯತ್ತ ಯುವ ಪ್ರೇಕ್ಷಕರು ಮತ್ತು ಹೊಸ ಕಲಾವಿದರು ಹಿಂದೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಕಲಾವಿದರನ್ನು ಸನ್ಮಾನಿಸಿದಾಗ ಅವರ ಜವಾಬ್ದಾರಿ ಹೆಚ್ಚುವುದರೊಂದಿಗೆ ಇನ್ನಷ್ಟು ಯುವಕರನ್ನು ಈ ಕಡೆಗೆ ಸೆಳೆಯಲು ಸಾಧ್ಯ ಎಂದರು.
ಪಾಂಡುರಂಗ ಪಾಟಕ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರಿನ ಬಿ.ಶಿವಾನಂದ ಪೈ, ಪಾಂಡುರಂಗ ಪೈ ಮತ್ತಿತರರು ಇದ್ದರು.
ಕೃಷ್ಣಾನಂದ ಪೈ ಸ್ವಾಗತಿಸಿದರು. ವಿಘ್ನೇಶ ಪೈ ನಿರೂಪಿಸಿ ಮಹೇಶ ಪೈ ವಂದಿಸಿದರು. ಬಳಿಕ ಸಾಲಿಗ್ರಾಮದ ಮೇಳದ ಕಲಾವಿದರಿಂದ ರಾಮ ಪಟ್ಟಾಭಿಷೇಕ, ದ್ರೋಣ ಪರ್ವ, ರುಕ್ಮಾವತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು.
ಈ ಸಂದರ್ಭದಲ್ಲಿ ಯಕ್ಷಗಾನದ ಉದಯನ್ಮೋಖ ಕಲಾವಿದರಾದ ತುಂಬ್ರಿ ಭಾಸ್ಕರ, ವಂಡಾರು ಗೋವಿಂದ ಮೊಗವೀರ, ನಾಗರಾಜ ಭಂಡಾರಿ ಹಾಗೂ ಯುವ ಭಾಗವತ ಸೂರಾಲು ರವಿ ಕುಮಾರ್ ಮತ್ತು ಡೇರೆ ಕೆಲಸಗಾರ ನಾಗು ಇವರನ್ನು ಸನ್ಮಾನಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com