ಮಾಹಿತಿ ಹಕ್ಕು ಕಾಯಿದೆ: ಕಾರ್ಯಾಗಾರ

ಉಡುಪಿ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಡಿ. 21ರಂದು ಬೆಂಗಳೂರಿನಲ್ಲಿ ಏಟ್ರಿಯಾ ಹೊಟೇಲ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಪಾರದರ್ಶಕತೆ ಮತ್ತು ಮಾಹಿತಿ ಬಹಿರಂಗಪಡಿಸುವಿಕೆ ಕುರಿತು ಒಂದು ದಿನ ಪ್ರಾದೇಶಿಕ ಕಾರ್ಯಾಗಾರವನ್ನು ಏರ್ಪಡಿಸಿದೆ. 

ಈ ಕೆಳಕಂಡ 5 ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. 1. ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಸರ್ಕಾರಿ ಕಾರ್ಯ ಚಟುವಟಿಕೆಗಳಲ್ಲಿ ಪಾರದರ್ಶಕತೆ, 2. ಸ್ವಯಂ ಮಾಹಿತಿ ಬಹಿರಂಗಪಡಿಸುವಿಕೆ ಸವಾಲುಗಳು ಮತ್ತು ತೊಡಕುಗಳು. 3. ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಕಡಿಮೆಯಾಗುತ್ತಿರುವ ಭ್ರಷ್ಟಾಚಾರ, ವಾಸ್ತವ ಅಥವಾ ಮಿಥ್ಯ 4. ಮಾಹಿತಿಹಕ್ಕು ಕಾಯ್ದೆ ಪರಿಣಾಮವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಜನರ ಸಹಭಾಗಿತ್ವ. 5. ಮಾಹಿತಿ ಹಕ್ಕು ಕಾಯ್ದೆಯ ಭಾಗಿದಾರರಿಗೆ ಜಾಗೃತಿ.

ಈ ವಿಷಯಗಳ ಕುರಿತು ಆಸಕ್ತರು ತಮ್ಮ ಯಶೋಗಾಥೆಗಳನ್ನು ಕೆ.ಎಂ. ಪ್ರಸಾದ್‌, ಕಾರ್ಯಾಗಾರ ಸಂಯೋಜಕರು ಇವರಿಗೆ ಇ-ಮೇಲ್‌ ಮೂಲಕ (ದೂರವಾಣಿ 9448719627) ಡಿ. 10ರೊಳಗೆ ಕಳುಹಿಸಬಹುದು.

ಆಯ್ಕೆ ಸಮಿತಿಯು ಆಯ್ಕೆ ಮಾಡಿದ ಐದು ಅತ್ಯುತ್ತಮ ಯಶೋಗಾಥೆಗಳಿಗೆ ತಲಾ 5,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ಆಡಳಿತ ತರಬೇತಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com