ಜಿಲ್ಲೆಯಲ್ಲಿ ಅನಧಿಕೃತ ಫಲಕಗಳಿಗೆ ಅವಕಾಶ ಇಲ್ಲ: ಡಾ.ಎಂ.ಟಿ.ರೇಜು

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ವಾಗಿ ಪ್ರದರ್ಶಿಸಲಾಗುತ್ತಿರುವ ಬ್ಯಾನರ್‌ಗಳು, ಜಾಹೀರಾತು ಫಲಕ ಗಳು, ಬಂಟಿಂಗ್ಸ್, ಕಟೌಟ್‌ಗಳು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿರು ವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.
     ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಅನಧಿಕೃತ, ಬ್ಯಾನರ್‌, ಬಂಟಿಂಗ್‌ ಕಟೌಟ್‌ಗಳನ್ನು ತೆರವುಗೊಳಿಸುವ ಬಗ್ಗೆ ಮತ್ತು ಪ್ರದರ್ಶಿಸಲು ಅನುಮತಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಕೆಲವು ನಿರ್ದೇಶನ ನೀಡಿದರು.
    ಬ್ಯಾನರ್‌ ಅಥವಾ ಯಾವುದೇ ಮಾದರಿ ಜಾಹೀರಾತು ಪ್ರದರ್ಶಿಸುವ ಮುನ್ನ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದುಕೊಳ್ಳಬೇಕು. ಎಷ್ಟು ಕಾಲದ ವರೆಗೆ ಪ್ರದರ್ಶಿಸಲಾಗುತ್ತದೆ ಎಂದು ನಮೂದಿಸಬೇಕು ಮತ್ತು ಕಾಲಾವಧಿ ಮುಗಿದ ನಂತರ ಅದನ್ನು ಸಂಬಂಧಿಸಿದವರೇ ತೆರವುಗೊಳಿ ಸಬೇಕು ಎಂದು ಅವರು ಹೇಳಿದರು.
      ಪ್ರದರ್ಶನ ಫಲಕಗಳನ್ನು ಪ್ರದರ್ಶಿಸಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು, ಆಯಾ ಸ್ಥಳದ ಮಾಲೀಕರ ಸೂಕ್ತ ಅನುಮತಿ ಯೊಂ ದಿಗೆ ಆ ಸ್ಥಳದ ಕಣ್ಣು ನಕ್ಷೆಯನ್ನು (ಐ ಸ್ಕೆಚ್) ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ಚುನಾವಣಾ ಸಂದರ್ಭ ದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ಬ್ಯಾನರ್, ಪೋಸ್ಟರ್, ಕಟೌಟ್ಸ್ ಇತ್ಯಾದಿಗಳನ್ನು ಪ್ರದರ್ಶಿಸತಕ್ಕದ್ದಲ್ಲ. ಅನುಮತಿ ಪಡೆಯಲು  4ರಿಂದ 5 ದಿನದ ಕಾಲಾವಕಾಶ ನೀಡಲಾಗಿದೆ. 30 ದಿನಗಳ ಪರವಾನಗಿ ನೀಡಿ ನಂತರ ಶುಲ್ಕ ಪಡೆದು 15 ದಿನಗಳ ಕಾಲ ವಿಸ್ತರಿಸಬಹುದು ಎಂದು ಹೇಳಿದರು.
      ಕಾಲಮಿತಿ ಮುಗಿದ ನಂತರ ಸಂಬಂಧಪಟ್ಟವರು ಫಲಕ ತೆರವುಗೊ ಳಿಸದಿದ್ದರೆ ತೆರವುಗೊಳಿಸುವ ವೆಚ್ಚ ವನ್ನು ಠೇವಣಿ ಹಣ ಮುಟ್ಟು ಗೋಲು  ಹಾಕಿ ಕೊಂಡು ಭರಿಸಲಾಗುತ್ತದೆ. ಈ ರೀತಿ ನಿಯಮ ಉಲ್ಲಂಘಿಸಿ ದವರಿಗೆ ಮತ್ತೆ ಪರವಾನಿಗೆ ನೀಡದಂತೆ ಕ್ರಮವ ಹಿಸಲು ಸಂಬಂಧಪಟ್ಟವರಿಗೆ ಜಿಲ್ಲಾಧಿ ಕಾರಿಗಳು ನಿರ್ದೇಶನ ನೀಡಿ ದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಬಿ. ಬೋರಲಿಂಗಯ್ಯ ಹೇಳಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com