ಕುಂದಾಪುರ: ಮತ ಎಣಿಕೆ ಕೇಂದ್ರ ಬದಲು

ಉಡುಪಿ: ಕುಂದಾಪುರ ತಾಲೂಕಿನ ಯಡ್ತರೆ, ಬೈಂದೂರು ಹಾಗೂ ಗಂಗೊಳ್ಳಿ ಗ್ರಾಪಂಗಳಿಗೆ ಡಿ.8ರಂದು ನಡೆಯುವ ಚುನಾವಣೆಯ ಮತಗಳ ಎಣಿಕೆ ಕಾರ್ಯ ಡಿ.11ರಂದು ಈ ಮೊದಲು ನಿರ್ಧರಿಸಿ ದಂತೆ ಕುಂದಾಪುರ ತಾಲೂಕು ಕಚೇರಿಯ ಬದಲು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಆದುದರಿಂದ ಮತ ಎಣಿಕೆ ಕೇಂದ್ರ ದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಡಿ.11 ರಂದು ಬೆಳಗ್ಗೆ 6ಗಂಟೆಯಿಂದ ಸಂಜೆ 8 ಗಂಟೆಯವರೆಗಿನ ಅವಧಿ ಯನ್ನು ಮದ್ಯಪಾನ ನಿಷೇಧ ದಿನ(ಡ್ರೈ ಡೇಸ್) ಎಂದು ಘೋಷಿಸಿ, ಈ ಸಮಯದಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಅದೇಶ ನೀಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com