ಪ್ರಶಸ್ತಿಗೆ ತುಳು ಕಾದಂಬರಿ ಹಸ್ತಪ್ರತಿ ಆಹ್ವಾನ

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ಎಸ್‌ಯು ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಬಹುಮಾನಕ್ಕೆ ಆಯ್ಕೆಯಾಗದ, ಮುದ್ರಣವಾಗದ, ಕ್ರೌನ್‌ 1/8 ಆಕಾರದಲ್ಲಿ 120 ಪುಟ ಮೀರುವ ಕಾದಂಬರಿಯಾಗಿರಬೇಕು. ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶ ಕೂಡಿದ್ದು ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತು ಆಧರಿಸಿರಬಹುದು. ಹಸ್ತಪ್ರತಿಯನ್ನು ಮಾ. 25ರೊಳಗೆ ಎಂ. ನಂದಕುಮಾರ್‌, ಸಂಚಾಲಕರು ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಮಿತಿ, 'ನಂದಗೋಕುಲ', ಮಾರ್ಕೆಟ್‌ ರಸ್ತೆ, ಪರ್ಕಳ 576107, ಉಡುಪಿ ಜಿಲ್ಲೆ ಇಲ್ಲಿಗೆ (ದೂ: 2544310) ಕಳುಹಿಸಬೇಕು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com