ರಂಗಭೂಮಿ: ಬೈಂದೂರಿನ ಲಾವಣ್ಯ ತಂಡದ 'ಮರಣ ಮೃದಂಗ' ಪ್ರಥಮ

ಉಡುಪಿ: ಇಲ್ಲಿನ ರಂಗಭೂಮಿ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ಲಾವಣ್ಯ ತಂಡದ 'ಮರಣ ಮೃದಂಗ' ನಾಟಕ ಡಾ| ಟಿಎಂಎ ಪೈ ಸ್ಮಾರಕ ಪರ್ಯಾಯ ಫ‌ಲಕ ಮತ್ತು ದಿ| ಪುತ್ತು ವೈಕುಂಠ ಶೇಟ್‌ ಸ್ಮಾರಕ ಪ್ರಥಮ ನಗದು ಬಹುಮಾನ 15,000 ರೂ. ಗಳಿಸಿದೆ.
      ಶಿವಮೊಗ್ಗದ ಕಲಾಜ್ಯೋತಿ ತಂಡದ 'ಬಿಂಬ' ನಾಟಕ ದಿ| ಕೆ. ಆನಂದ ಗಾಣಿಗ ಅವರ ಮಕ್ಕಳಿಂದ ಪ್ರಾಯೋಜಿತವಾದ ದ್ವಿತೀಯ ನಗದು ಬಹುಮಾನ 10,000 ರೂ. ಮತ್ತು ಹಾರಾಡಿ ಭೂಮಿಕಾ ತಂಡದ 'ಅಗ್ನಿಲೋಕ' ನಾಟಕ ಡಾ| ಪಿ. ಗಣಪತಿ ರಾವ್‌ ಮತ್ತು ಪಿ. ವಾಸುದೇವ ರಾವ್‌ ಪ್ರಾಯೋಜಿತ ತೃತೀಯ ಬಹುಮಾನ 5,000 ರೂ. ಗಳಿಸಿದೆ.
      'ಮರಣ ಮೃದಂಗ'ದ ನಿರ್ದೇಶಕ ರಾಜೇಂದ್ರ ಕಾರಂತ್‌ ಅವರು ಶ್ರೇಷ್ಠ ನಿರ್ದೇಶನಕ್ಕಾಗಿರುವ ಡಾ| ಟಿಎಂಎ ಪೈ ಸ್ಮಾರಕ ಪರ್ಯಾಯ ಫ‌ಲಕ ಮತ್ತು ಪ್ರಥಮ ನಗದು ಬಹುಮಾನ 2,000 ರೂ. ಗಳಿಸಿದ್ದಾರೆ. 'ಬಿಂಬ'ದ ನಿರ್ದೇಶಕ ಮಧುಸೂದನ ಜೆ. ಘಾಟೆ ಮತ್ತು 'ಅಗ್ನಿಲೋಕ'ದ ನಿರ್ದೇಶಕ ಬಿ.ಎಸ್‌. ರಾಮ ಶೆಟ್ಟಿ ಅವರು ದ್ವಿತೀಯ, ತೃತೀಯ ಬಹುಮಾನ ಗಳಿಸಿದ್ದಾರೆ.

ಶ್ರೇಷ್ಠ ನಟ: 'ಮರಣ ಮೃದಂಗ'ದ ನರಸಿಂಹ ರಾವ್‌ ಪಾತ್ರಧಾರಿ ಯೋಗೇಶ್‌ ಬಂಕೇಶ್ವರ, 2. ಭರಮ್ಯ ಪಾತ್ರಧಾರಿ ಬಿ. ಗಣೇಶ ಕಾರಂತ, 3. 'ಅಗ್ನಿಲೋಕ'ದ ಅಗ್ನಿ ಪಾತ್ರಧಾರಿ ಬಿ.ಎಸ್‌. ರಾಮ ಶೆಟ್ಟಿ.

ಶ್ರೇಷ್ಠ ನಟಿ: 'ಬಿಂಬ'ದ ಸೀತೆ ಪಾತ್ರಧಾರಿ ಮಧುರಾ, 2. 'ಕಿತ್ತೂರ ನಿರಂಜನಿ'ಯ ನಿರಂಜನಿ ಪಾತ್ರಧಾರಿ ಸುಪ್ರಿಯಾ ಎಸ್‌. ರಾವ್‌, 3. 'ಅಂಧಗಾಂಧಾರ'ದ ಕೋಮಲ ಗಾಂಧಾರಿ ಪಾತ್ರಧಾರಿ ಎಚ್‌.ಎಸ್‌. ಕವಿತಾ.

ಶ್ರೇಷ್ಠ ಸಂಗೀತ: ಶಿವಮೊಗ್ಗದ ಅಂಚೆ ಸಾಂಸ್ಕೃತಿಕ ಬಳಗದ 'ಕಿತ್ತೂರು ನಿರಂಜನಿ', 2. 'ಮರಣ ಮೃದಂಗ', 3. 'ಬಿಂಬ'.

ಶ್ರೇಷ್ಠ ರಂಗಪರಿಕರ: 'ಅಗ್ನಿಲೋಕ', 2. 'ಬಿಂಬ', 3. ಸುಮನಸಾ ಕೊಡವೂರು ತಂಡದ 'ಎಲ್ಲರೂ ನನ್ನ ಮಕ್ಕಳೇ'.

ಶ್ರೇಷ್ಠ ಪ್ರಸಾಧನ:'ಅಗ್ನಿಲೋಕ', 2. 'ಕಿತ್ತೂರ ನಿರಂಜನಿ', 3. 'ಬಿಂಬ'.

ಶ್ರೇಷ್ಠ ಬೆಳಕು: 'ಮರಣ ಮೃದಂಗ', 2. 'ಕಿತ್ತೂರ ನಿರಂಜನಿ', 3. 'ಎಲ್ಲರೂ ನನ್ನ ಮಕ್ಕಳೇ'.

ಹಾಸ್ಯಪಾತ್ರ: 'ರಕ್ತಾಂಜಲಿ' ನಾಟಕದ ನಟ್ಟು ಶಾಸ್ತ್ರೀ ಪಾತ್ರಧಾರಿ ಶಿವರಾಮ ಹೆಗಡೆ.

ಮೆಚ್ಚುಗೆ ಬಹುಮಾನ: ಸುಮನಸಾ ಕೊಡವೂರು ತಂಡದ ರಾಜಗೋಪಾಲ ಶೇಟ್‌, ಬಾಲಕೃಷ್ಣ ಕೊಡವೂರು, ಮಂಗಳೂರು ಕೃಷ್ಣ ಕಲಾ ತಂಡದ ಶ್ರೀದರ್ಶನ್‌, ಕುಡ್ಲ ರಂಗಮಿತ್ರರು ತಂಡದ ರಂಗನಾಥ ಎಂ., ಬೈಂದೂರು ಲಾವಣ್ಯ ತಂಡದ ಗಿರೀಶ್‌ ಬೈಂದೂರು.

12 ತಂಡಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಜಿ.ಕೆ. ಐತಾಳ್‌, ಕೆ.ಎಂ. ರಾಘವ ನಂಬಿಯಾರ್‌, ಆರ್‌.ಎಲ್‌. ಭಟ್‌, ಎಸ್‌.ಎ. ಕೃಷ್ಣಯ್ಯ, ಜಾನಕಿ ಬ್ರಹ್ಮಾವರ ತೀರ್ಪುಗಾರರಾಗಿ ಸಹಕರಿಸಿದ್ದರು. ಜ. 5ರಂದು ಬಹುಮಾನ ವಿತರಣೆ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪಿ. ವಾಸುದೇವ ರಾವ್‌ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com