ಸ್ವ-ಉದ್ಯೋಗ ಯೋಜನೆಗಳನ್ನು ಬಳಸಿಕೊಳ್ಳಿ:ಅಶೋಕ ನಾಯ್ಕ

ಬ್ರಹ್ಮಾವರ: ಬ್ಯಾಂಕುಗಳು ವಿವಿಧ ಸ್ವ-ಉದ್ಯೋಗ ಕೈಗೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇವುಗಳನ್ನು  ಯುವಕರು ಬಳಸಿಕೊಳ್ಳಬೇಕು, ಅದರಿಂದ ಉದ್ಯಮಶೀಲತೆಯನ್ನು ಸಾಧಿಸುವಂತೆ ಮಣಿಪಾಲ ಸಿಂಡಿಕೇಟ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಅಶೋಕ ನಾಯ್ಕ ಕರೆ ನೀಡಿದರು.

ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಇಲಾಖೆ ಹಾಗೂ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ  ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಖರೀದಿದಾರರು ಹಾಗೂ ಮಾರಾಟಗಾರರ ವಿಶೇಷ ವಾದ ಒಂದು ದಿನದ ಕಾರ್ಯಾ ಗಾರವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತ ನಾಡಿದರು.

ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಇಲಾಖೆಯ ಉಪ ನಿರ್ದೇಶಕ ಕೆ.ಸಾಕ್ರೆಟಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಾಗಾರದಿಂದ ತಮ್ಮ ಉದ್ಯಮದ ವಸ್ತುಗಳ ಮಾರಾಟದ ಪ್ರಯೋಜನ ಪಡೆಯಲು ಕೋರಿದರು.

ಕುದುರೆಮುಖ ಅದಿರು ಕಂಪೆನಿಯ ಜಂಟಿ ಮಹಾಪ್ರಬಂಧಕ ರಾಕ್ ಡಿಸೋಜಾ ಮಾತನಾಡಿ, ಕಂಪೆನಿಯಿಂದ ಖರೀದಿಸುವ ವಿವಿಧ ವಸ್ತುಗಳು ಹಾಗೂ ಅದರ ಪ್ರಕ್ರಿಯೆಗಳ ಬಗ್ಗೆ ತಿಳಿಸಿದರು.

ಸಹಾಯಕ ನಿರ್ದೇಶಕ ಎಸ್.ಎಂ. ಸುಂದರ್ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ವಿಜಯಕುಮಾರ್ ಡಿ. ನೇರ್ಲೆಕರ್ ಸ್ವಾಗತಿಸಿದರು. ಉಪನ್ಯಾಸಕ  ಬಸವರಾಜ್ ವಂದಿಸಿದರು. ಉಪನ್ಯಾಸಕ ಕರುಣಾಕರ ಜೈನ್  ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com