ಅಂಪಾರು: ಮೂರು ಒಕ್ಕೂಟಗಳ ಪದಗ್ರಹಣ

ಅಂಪಾರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗಗಳ ಬಡವರು, ಕೃಷಿಕರು, ರೈತರು ಹಾಗೂ ಮಹಿಳೆಯರ ಬಗ್ಗೆ ಕಾಳಜಿ ಹೊಂದಿದ ಯೋಜನೆ. ಮಹಿಳೆಯರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣ ಮಾಡಿದೆ. ಈ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಸರಕಾರ ಕಾಣದ ಕನಸು ಕಂಡವರು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. 
     ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಪಾರು ವಿಭಾಗದ ಅಂಪಾರು ಎ ಹಾಗೂ ಅಂಪಾರು ಬಿ ಮತ್ತು ನೆಲ್ಲಿಕಟ್ಟೆ ಈ ಮೂರು ಒಕ್ಕೂಟಗಳ ಸ್ವ ಸಂಘಗಳ ಪದಗ್ರಹಣ ಸಮಾರಂಭವನ್ನು ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯ ವಿದ್ಯಾದಾಯಿನಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. 
    ಗ್ರಾಮಾಭಿವೃದ್ಧಿ ಯೋಜನೆಯು ಕುಂದಾಪುರ ತಾಲೂಕಿನಲ್ಲಿ ಯಶಸ್ವಿ ಕಂಡ ಯೋಜನೆ. ನೂತನ ಪದಾಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಉತ್ತಮ ಯೋಜನೆ ರೂಪಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ಯೋಜನೆಗೆ ಸಂಪೂರ್ಣ ಸಹಕಾರ ನೀಡುದರೊಂದಿಗೆ, ನೀವೂ ರೂಪಿಸಿರುವ ಉತ್ತಮ ಯೋಜನೆಗಳನ್ನು ಕ್ಷೇತ್ರದ ಅಭಿವೃದ್ಧಿಯ ಕ್ರಿಯಾಯೋಜನೆಯಲ್ಲಿ ಆಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. 
    ಯೋಜನೆಯ ನಿರ್ದೇಶಕ ದುಗ್ಗೇ ಗೌಡ ಮಾತನಾಡಿ, ಯೋಜನೆಯು ಜನ ಸಾಮಾನ್ಯರ ಪರ ಕೆಲಸ ಮಾಡಿದರೆ, ಜನಜಾಗೃತಿ ಸಮಿತಿ ಮದ್ಯ ಮುಕ್ತ ಸಮಾಜ ನಿರ್ಮಾಣದಲ್ಲಿ ಕೆಲಸ ಮಾಡುತ್ತದೆ. ಯೋಜನೆಯು ಸದುಪಯೋಗವಾಗಬೇಕು ಎನ್ನುವ ಉದ್ದೇಶ ಡಾ. ವೀರೇಂದ್ರ ಹೆಗ್ಗಡೆ ಅವರದ್ದಾಗಿರುವುದರಿಂದ ಯೋಜನೆಯು ಈ ಮಟ್ಟದಲ್ಲಿ ಬೆಳಿದಿದೆ ಎಂದು ಹೇಳಿದರು. 
    ಅಂಪಾರು ಗ್ರಾಪಂ ಅಧ್ಯಕ್ಷೆ ಕೃಷ್ಣಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಪಂ ಸದಸ್ಯ ಪ್ರಕಾಶ ಟಿ. ಮೆಂಡನ್, ತಾಪಂ ಸದಸ್ಯ ಪ್ರದೀಪ ಕುಮಾರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ನಾಗರಾಜ ಶೆಟ್ಟಿ, ಜನ ಜಾಗೃತಿ ವೇದಿಕೆ ಅಧ್ಯಕ್ಷ ಶ್ಯಾಮ್‌ರಾಜ್ ಭಟ್, ನೆಲ್ಲಿಕಟ್ಟೆ ಒಕ್ಕೂಟ ಅಧ್ಯಕ್ಷ ಗಣೇಶ್ ಮೊಗವೀರ, ನೂತನ ಅಧ್ಯಕ್ಷ ರಾಘವೇಂದ್ರ ಎಂ. ಮೊಗವೀರ, ಅಂಪಾರು ಎ ಒಕ್ಕೂಟ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ನೂತನ ಅಧ್ಯಕ್ಷ ರಾಮ ಶೆಟ್ಟಿಗಾರ್, ಅಂಪಾರು ಬಿ ಒಕ್ಕೂಟ ಅಧ್ಯಕ್ಷ ಮಂಜುನಾಥ ಕಿಣಿ, ನೂತನ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಪಸ್ಥಿತರಿದರು. 
     ಯೋಜನೆ ವತಿಯಿಂದ ಅಂಪಾರು ಗ್ರಾಪಂಗೆ ಕುರ್ಚಿ ಹಾಗೂ ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಸಿಲಾನ್ ಚೇಂಬರ್‌ನ್ನು ನೀಡಲಾಯಿತು. ಸೇವಾ ಪ್ರತಿನಿಧಿ ಅನಿತಾ ಸ್ವಾಗತಿಸಿದರು. ಜ್ಯೋತಿ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಜ್ಯೋತಿ ಹಾಗೂ ನಾಗಶ್ರೀ ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಸೇವಾ ಪ್ರತಿನಿಧಿ ಭುವನ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com