ತಲ್ಲೂರು ದೊಡ್ಮನೆ ಕಂಬಳ ಮಹೋತ್ಸವ

ತಲ್ಲೂರು: ಇತಿಹಾಸ ಪ್ರಸಿದ್ಧ ತಲ್ಲೂರು ದೊಡ್ಮನೆ ಕಂಬಳ ಮಹೋತ್ಸವ ಸೋಮವಾರ ಸಂಭ್ರಮದಿಂದ ಜರುಗಿತು.   ಸಹಸ್ರಾರು ಕಂಬಳ ಪ್ರೇಮಿಗಳು, ಎಫ್‌ಎಸ್‌ಎಲ್ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಕಂಬಳ ವೀಕ್ಷಿಸಿ ಸಂಭ್ರಮಿಸಿದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ತಲ್ಲೂರು ದೊಡ್ಮನೆ ಕಂಬಳ ಮಹೋತ್ಸವ ಕರಾವಳಿ ಜಿಲ್ಲೆಯಲ್ಲಿ ಸಂಪ್ರದಾಯ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುವ ಬಹುದೊಡ್ಡ ಕಂಬಳ ಮಹೋತ್ಸವ ಆಗಿದ್ದು ಜಾತ್ರೆಯ ವಾತಾವರಣ ಕಂಡುಬಂತು. ಜನರು ಕಂಬಳಗದ್ದೆಮನೆಯ ದೆವದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕಂಬಳ ವೀಕ್ಷಿಸಿ ಸಿಹಿತಿಂಡಿ ಖರೀದಿಸಿದರು.   ಬಹುಮಾನ ವಿತರಣೆ: ಸಂಜೆ ವಿಜೇತ ಕೋಣಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿ ನಾಡಾ ಐಟಿಐ ಸಂಸ್ಥೆಯ ಉಪನ್ಯಾಸಕ ಕೆ.ಸಿ.ರಾಜೇಶ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ ಶುಭಾಶಂಸನೆ ಮಾಡಿದರು. ಕಂಬಳಗದ್ದೆ ಮನೆಯ ಟಿ.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಉತ್ಸವಕ್ಕೆ ದುಡಿದ ನರಸಿಂಹ ಮಡಿವಾಳ, ದಿನೇಶ್ ಕೋಟೆಬಾಗಿಲು, ಚಿಕ್ಕ ಕೋಟೆಬಾಗಿಲು, ಬಾಬು ಕೋಟೆಬಾಗಿಲು ಅವರನ್ನು ಸನ್ಮಾನಿಸಲಾಯಿತು.   ವಿಜೇತ ಕೋಣಗಳಿಗೆ ಆಕರ್ಷಕ ಫಲಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಕಂಬಳಗದ್ದೆ ಮನೆಯ ವಸಂತ ಹೆಗ್ಡೆ, ಕಂಬಳದ ಗುರಿಕಾರ ಬಾರಕೂರು ಶಾಂತಾರಾಮ ಶೆಟ್ಟಿ, ಬಾಲಕಷ್ಣ ಶೆಟ್ಟಿ ಕಾಳಾವರ, ಕಂಬಳದ ಹಿರಿಯ ನೇತಾರ ವೆಂಕಟ ಪೂಜಾರಿ, ಮಹೇಂದ್ರ ಹೆಗ್ಡೆ ಉಪಸ್ಥಿತರಿದ್ದರು.   ದೆಹಿಕ ಶಿಕ್ಷಣ ಶಿಕ್ಷಕರಾದ ಕೀರ್ತಿಕುಮಾರ ಶೆಟ್ಟಿ ಮತ್ತು ಪ್ರಕಾಶ್ ಶೆಟ್ಟಿ ಬೆಳಗೋಡು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಾರ್ವಜನಿಕರಿಗೆ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com