ಉಡುಪಿ ಉತ್ಸವಕ್ಕೆ ಚಾಲನೆ

ಉಡುಪಿ: ನಗರಸಭೆ ಮತ್ತು ನೇಶನಲ್‌ ಕನ್ಸೂಮರ್‌ ಫೇರ್‌ ಸಹಭಾಗಿತ್ವದಲ್ಲಿ ನಡೆಯುವ ಬೃಹತ್‌ ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳವಾದ ಉಡುಪಿ ಉತ್ಸವವನ್ನು ಕಲ್ಸಂಕದ ರಾಯಲ್‌ ಗಾರ್ಡನ್‌ನಲ್ಲಿ ಶ್ರೀಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಉತ್ಸವಕ್ಕೆ ಮುನ್ನ ನಗರಸಭಾ ಕಚೇರಿಯಿಂದ ಉಡುಪಿ ಉತ್ಸವ ನಡೆಯುವ ಸ್ಥಳದವರೆಗೆ ನಡೆದ ಮೆರವಣಿಗೆಯನ್ನು ಶಾಸಕ ಪ್ರಮೋದ್‌ ಮಧ್ವರಾಜ್‌ ಉದ್ಘಾಟಿಸಿದರು.

ಇಂತಹ ಉತ್ಸವಗಳಾಗುವಾಗ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಹೆಚ್ಚಿಸುವ ಸಲುವಾಗಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಬೇಕು ಎಂದು ಸಂಸದ ಜಯಪ್ರಕಾಶ್‌ ಹೆಗ್ಡೆ ಸಲಹೆ ನೀಡಿದರು. ನಗರಸಭಾಧ್ಯಕ್ಷ ಯುವರಾಜ್‌, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಸೆಲಿನ್‌ ಕರ್ಕಡ, ವಸ್ತುಪ್ರದರ್ಶನ ಸಮಿತಿ ಸಂಚಾಲಕ ರಮೇಶ ಕಾಂಚನ್‌, ಬೀಚ್‌ ಉತ್ಸವ ಸಮಿತಿ ಸಂಚಾಲಕ ಪ್ರಶಾಂತ ಅಮೀನ್‌, ವೇದಿಕೆ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರಶಾಂತ ಭಟ್‌, ಪೌರಾಯುಕ್ತರಾದ ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀಕಾಂತ ರಾವ್‌, ಕೋಶಾಧಿಕಾರಿ ಶಾಂತಾರಾಮ್‌ ಸಾಲ್ವಂಕರ್‌, ಕನ್ಸೂಮರ್‌ ಫೇರ್‌ ಪರವಾಗಿ ಗೌತಮ್‌ ಅಗರ್‌ವಾಲ್‌, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com