ಚಕ್ರವರ್ತಿ ಸೂಲಿಬೆಲೆ ಅಪ್ಪಟ್ಟ ಸುಳ್ಳುಗಾರ: ಜಿಲ್ಲಾ ಕಾಂಗ್ರೆಸ್‌

ಉಡುಪಿ:  ಚಕ್ರವರ್ತಿ ಸೂಲಿಬೆಲೆ ಅಪ್ಪಟ್ಟ ಸುಳ್ಳುಗಾರ, ಬಿಜೆಪಿ ಏಜೆಂಟ್‌. ಸೋನಿಯಾ ಗಾಂಧಿ ಜಗತ್ತಿನ ಶ್ರೀಮಂತರ ಪೈಕಿ 12 ಸ್ಥಾನದಲ್ಲಿದ್ದಾರೆ ಎನ್ನುವ ಸುದ್ದಿ ಕಪೋಲಕಲ್ಪಿತ ಎಂದು ಮಾಧ್ಯಮಗಳು ತಪ್ಪೊಪ್ಪಿಕೊಂಡರೂ ಸೂಲಿಬೆಲೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರ.ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಹೇಳಿದ್ದಾರೆ.

67 ವರ್ಷ ದೇಶವಾಳಿದ ಕಾಂಗ್ರೆಸ್‌ ದೇಶವನ್ನು ಬಡ ರಾಷ್ಟ್ರವನ್ನಾಗಿಸಿದೆ ಎಂದು ಸೂಲಿಬೆಲೆ ಗೋಗರೆಯುತ್ತಿದ್ದಾರೆ. ವಿಶಾಲ ಭೂ ಪ್ರದೇಶ ಹಾಗೂ ಜನಸಂಖ್ಯೆ ಸ್ಫೋಟದಿಂದ ದೇಶ ಅಭಿವೃದ್ಧಿ ಹೊಂದುವಲ್ಲಿ ಸಂಪೂರ್ಣ ಸಫ‌ಲತೆ ಕಂಡಿರದಿದ್ದರೂ ಮಾಹಿತಿ ತಂತ್ರಜಾnನ, ಕೈಗಾರಿಕಾ ಕ್ಷೇತ್ರದಲ್ಲಿನ ಪ್ರಗತಿ, ವ್ಯಕ್ತಿಯ ಏರಿಕೆಯಲ್ಲಿನ ಸೂಚ್ಯಂಕ ಅಭಿವೃದ್ಧಿ ಸಂಕೇತ ಬಿಂಬಿಸುತ್ತದೆ. ಸಾಮಾನ್ಯನ ಆರ್ಥಿಕ ದೃಢತೆ ಅಭಿವೃದ್ಧಿ ಸೂಚನೆಯಲ್ಲವೆ. ಇದನ್ನು ಮರೆಮಾಚಿ ಅಭಿವೃದ್ಧಿ ಹೊಂದಿಲ್ಲ ಎನ್ನುವುದು ಮೂರ್ಖತನ. ಜನತೆ 1977ರಲ್ಲಿ ಕೇಂದ್ರದಲ್ಲಿ ಹೊಸ ಸರಕಾರಕ್ಕೆ ಮತ ನೀಡಿದರೂ ಅವಧಿಯನ್ನು ಸಂಪೂರ್ಣಗೊಳಿಸಲು ವಿಫ‌ಲಗೊಂಡು ತದನಂತರ ಜನತೆ ಕಾಂಗ್ರೆಸ್ಸಿಗೆ ಅವಕಾಶ ನೀಡಿದರು. 2004ರ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಜನತೆ ಅವಕಾಶ ನೀಡಿದರೂ 2ನೇ ಅವಧಿಗೆ ಉಳಿಸಿಕೊಳ್ಳಲಾಗಿಲ್ಲ. ದೇಶವನ್ನು ಬಿಜೆಪಿ ಅಭಿವೃದ್ಧಿಗೊಳಿಸಿದ್ದರೆ ಜನ ತಿರಸ್ಕರಿಸುತ್ತಿದ್ದರೇ?

ಯಾವುದೇ ಕುಟುಂಬದ ವ್ಯಕ್ತಿ ರಾಜಕೀಯದಲ್ಲಿ ತೊಡಗಿಸಿಕೊಂಡು ಜನಾಭಿಪ್ರಾಯದೊಂದಿಗೆ ನಾಯಕನಾದರೆ ಅದು ವಂಶಪಾರಂಪರ್ಯ ರಾಜಕೀಯವಾಗಲಾರದು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ನೆಹರೂ ಕುಟುಂಬದೊಂದಿಗೆ ಜನತೆ ಮುಖಂಡತ್ವವನ್ನು ಕಾಣುತ್ತಿರುವಾಗ ಅತ್ತ ಪಕ್ಷವನ್ನು ಕಟ್ಟಿ ಬೆಳೆಸಿದ ಆಡ್ವಾಣಿಯವರನ್ನು ಬಿಜೆಪಿ ನಿಷ್ಟ್ರಯೋಜಕ ಎಂದು ಪರಿಗಣಿಸಿದ್ದು ಸೂಲಿಬೆಲೆಯವರಿಗೆ ನಿಲುಕದ ವಿಚಾರವೆ? ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಬಿಟ್ಟು ಎಲ್ಲಿಯೂ ಸ್ವಂತ ಬಲವಿಲ್ಲ. ಸಂಪರ್ಕ ವ್ಯವಸ್ಥೆ, ವಾಹನಗಳು, ಶಿಕ್ಷಣ ಕ್ಷೇತ್ರದ ಕ್ರಾಂತಿಯಿಂದ ಉದ್ಯೋಗ ಸೃಷ್ಟಿ, ದೂರಸಂಪರ್ಕ ಸಾಧನದ ಪ್ರಗತಿಗಳು ಏನನ್ನು ಬಿಂಬಿಸುತ್ತದೆ ಎಂದು ಉತ್ತರಿಸಬೇಕು. ಕಾಂಗ್ರೆಸ್‌ ನೀಡಿದ ಕೊಡುಗೆ ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com