ಉಡುಪಿ ಪರ್ಯಾಯಕ್ಕೆ ಸರಕಾರದಿಂದ 3 ಕೋಟಿ: ಪ್ರಮೋದ್ ಮಧ್ವರಾಜ್‌

ಉಡುಪಿ: ರಾಜ್ಯ ಸರಕಾರವು 2013 - 14ನೇ ಸಾಲಿನಲ್ಲಿ ಉಡುಪಿ ನಗರಸಭೆಗೆ ಒಟ್ಟು 6 ಕೋ.ರೂ. ಎಸ್‌ಎಫ್ಸಿ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

ಉಡುಪಿಯ ನಗರದ ಅಭಿವೃದ್ಧಿ ಕಾಮಗಾರಿಗಳಿಗಾಗಿ 3 ಕೋ.ರೂ. ಹಾಗೂ ಪರ್ಯಾಯ ಸಂದರ್ಭ ನಡೆಸಬೇಕಾದ ಮೂಲಸೌಕರ್ಯ ಕಾಮಗಾರಿಗಾಗಿ 3 ಕೋ.ರೂ.ಗಳನ್ನು ಸರಕಾರ ಮಂಜೂರು ಮಾಡಿದೆ. ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ತುರ್ತಾಗಿ ಯಾವ ಕಾಮಗಾರಿಗಳನ್ನು ನಡೆಸಬೇಕೆಂದು ನಿರ್ಧರಿಸಿ ಪ್ರತಿಯೊಂದು ವಾರ್ಡ್‌ಗೂ ಅನುದಾನ ಹಂಚಿಕೆ ಮಾಡಲಾಗುವುದು. ಕ್ರಿಯಾಯೋಜನೆ ತಯಾರಿಸಿ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

   ಈ ಹಿಂದಿನ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ನಗರೋತ್ಥಾನ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿರಲಿಲ್ಲ. 'ಬಿಡುಗಡೆಯಾಗಿದೆ' ಎಂದು ಬಿಜೆಪಿಯವರು ಹೇಳಿದ್ದು ಮಾತ್ರ. ಹಣ ಬಿಡುಗಡೆಯಾದದ್ದು ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ. ಪರ್ಯಾಯೋತ್ಸವ ಕಾಮಗಾರಿಗೆ 10 ಕೋ.ರೂ. ಬೇಡಿಕೆ ಸಲ್ಲಿಸಿದ್ದೆವು. ಮುಖ್ಯಮಂತ್ರಿಯವರು 3 ಕೋ.ರೂ. ಬಿಡುಗಡೆ ಮಾಡಿದ್ದಾರೆ. ಸಂಸದರು, ತಾನು ಹಾಗೂ ನಗರಸಭೆಯ ಮನವಿಯ ಮೇರೆಗೆ ಈ ಅನುದಾನ ಬಿಡುಗಡೆಯಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್‌ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಮೋದ್‌ ಹೇಳಿದರು.

ನಗರಸಭಾಧ್ಯಕ್ಷ ಯುವರಾಜ್‌, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೆಲಿನ್‌ ಕರ್ಕಡ, ಸದಸ್ಯೆ ಶೋಭಾ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com