ದತ್ತ ಜಯಂತಿಗೆ ಜಿಲ್ಲೆಯಿಂದ 6000 ದತ್ತ ಮಾಲಾಧಾರಿಗಳು

ಉಡುಪಿ: ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ನೇತೃತ್ವದಲ್ಲಿ ಡಿ. 16ರಂದು ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ನಡೆಯುವ ದತ್ತ ಜಯಂತಿಯಲ್ಲಿ ಉಡುಪಿ ಜಿಲ್ಲೆಯಿಂದ 6 ಸಾವಿರ ದತ್ತ ಮಾಲಾಧಾರಿಗಳು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರಿನ ಚಂದ್ರ ದ್ರೋಣ ಪರ್ವತದಲ್ಲಿರುವ ದತ್ತ ಪೀಠವು ದೇಶದ ಪ್ರಮುಖ ದತ್ತ ಕ್ಷೇತ್ರಗಳಲ್ಲೊಂದಾಗಿದ್ದು, ಡಿ.7ರಿಂದ ದತ್ತ ಮಾಲಾಧಾರಣೆ ಆರಂಭವಾಗಲಿದೆ ಎಂದು ಹೇಳಿದರು. 

ಡಿ. 7ರಂದು ಬೆಳಗ್ಗೆ 7 ಗಂಟೆಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪ್ರಮುಖ ಕಾರ್ಯಕರ್ತರು ದತ್ತ ಮಾಲಾಧಾರಣೆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಡಿ. 14ರಂದು ಮಾತೆಯರಿಂದ ಅನಸೂಯಾ ದೇವಿ ಪೂಜೆ ನಡೆಯಲಿದೆ. ಡಿ. 15ರಂದು ಶೋಭಾ ಯಾತ್ರೆ, ಡಿ. 16ರಂದು ದತ್ತ ಜಯಂತಿ ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ಸಭೆ ಜರುಗಲಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ರಾಜೇಶ್ ಪೇರಲ್ಕೆ, ದಿನೇಶ್ ಮೆಂಡನ್, ಸುನಿಲ್ ಕೆ. ಆರ್. ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com