ಸ್ವಾಮಿ ವಿವೇಕಾನಂದ ಜನ್ಮವರ್ಷಾಚರಣೆ

ಉಪ್ಪಿನಕುದ್ರು: ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಶಕ್ತಿಚೆ„ತನ್ಯ ಅಡಗಿದೆ. ಅದನ್ನು ಸೂಕ್ತರೀತಿಯಲ್ಲಿ ಗುರುತಿಸಿಕೊಳ್ಳುವುದು ಅಗತ್ಯ. ತಮ್ಮ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯ ಅವಕಾಶವನ್ನು ಹೊಂದಲು ಪ್ರಯತ್ನಿಸಬೇಕು. ಉಪದೇಶಕ್ಕಿಂತ ಆಚರಣೆ ಬಹುಮುಖ್ಯವೇ ಆದರೂ ಮೌಲ್ಯಯುತ ಹಾಗೂ ಸತ್ವಯುತವಾದ ಬೋಧನೆಗಳು ಬದುಕಿಗೆ ಉತ್ತಮ ಪ್ರೇರಣೆಯನ್ನು ಒದಗಿಸುತ್ತವೆ ಎಂದು ಉಪ್ಪಿನಕುದ್ರು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಭಾಸ್ಕರ ಮಯ್ಯ ಅವರು ಹೇಳಿದರು.

ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ವರ್ಷಾಚರಣೆಯ ಅಂಗವಾಗಿ ಯಳಜಿತ್‌ನ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ದಶಂಬರ 5ರಂದು ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ವಿಶೇಷ ಉಪನ್ಯಾಸ ಮತ್ತು ಉಚಿತ ಪುಸ್ತಕ ವಿತರಣೆಯ 139ನೇ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ ತಲ್ಲೂರು ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಹೋಬಳಿದಾರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಯಳಜಿತ್‌ನ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ ಶೆಣೆ„ ಅವರು ವಿಶೇಷ ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಹಶಿಕ್ಷಕರಾದ ಮಂಜುನಾಥ ನಾಯಕ್‌, ಧನಂಜಯ ವಿ. ನಾಯಕ್‌ ಹಾಗೂ ಸುರೇಶ್‌ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು.

ಸಹಶಿಕ್ಷಕಿ ಸವಿತಾ ಜಿ. ಅವರು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ಕೃಷ್ಣ ನೇರಳಕಟ್ಟೆ ಅವರು ವಂದಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನತತ್ವ ಸಂದೇಶಗಳನ್ನು ಕುರಿತ ಪುಸ್ತಕಗಳನ್ನು ಉಚಿತವಾಗಿ ಹಂಚಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

2 comments:

Rajesh Holla said...
This comment has been removed by the author.
Rajesh Holla said...

Good to see events at Uppinakudru ,, way to go..

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com