ಕಟ್ಟಡ ಕಾರ್ಮಿಕರ ಗುರುತು ಪತ್ರ ವಿತರಣೆ

ವಂಡ್ಸೆ: ಕಟ್ಟಡ ಕಾರ್ಮಿಕರು ಸಂಘದಲ್ಲಿ ಸಕ್ರೀಯರಾಗಿ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸಿ ಗುರುತು ಪತ್ರ ಪಡೆದು ಅವರ ಕುಟುಂಬಗಳಿಗೆ ಸೌಲಭ್ಯವನ್ನು ಪಡೆಯಬೇಕಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಹೇಳಿದರು.
ಅವರು ವಂಡ್ಸೆಯಲ್ಲಿ ಇತ್ತೀಚೆಗೆ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ವಂಡ್ಸೆ ಘಟಕದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಗುರುತು ಪತ್ರ ವಿತರಿಸಿ ಮಾತನಾಡಿದರು. ಕಲ್ಯಾಣ ಮಂಡಳಿಯು ಕೊಡಮಾಡಿದ ಲಕ್ಷಾಂತರ ರೂಪಾಯಿ ಸೌಲಭ್ಯಗಳನ್ನು ಈಗಾಗಲೇ ಕಟ್ಟಡ ಕಾರ್ಮಿಕರಿಗೆ ಸಂಘದಿಂದ ಪಡೆಯಲು ಸಾಧ್ಯವಾಗಿದೆ. ಇದರ ಜತೆಗೆ ಕಟ್ಟಡ ಕಾರ್ಮಿಕರ ಪಿಂಚಣಿ ಹೆಚ್ಚಳಕ್ಕೆ ಸಂಘ ಹೋರಾಟ   ನಡೆಸಲಾಗಿದೆ ಎಂದರು.
ಘಟಕದ ಅಧ್ಯಕ್ಷರಾದ ಸುರೇಶ ಗಾಣಿಗ ಮಾತನಾಡಿ, ಕಾರ್ಮಿಕರು ಸಂಘಕ್ಕೆ ಸೇರ್ಪಡೆಗೊಂಡು ಸಂಘ ಬಲಗೊಳಿಸಬೇಕು. ಅಲ್ಲದೇ ಸೌಲಭ್ಯ ಪಡೆಯಬೇಕು ಎಂದರು. ಸಭೆಯಲ್ಲಿ ಘಟಕದ ಕಾರ್ಯದರ್ಶಿ ಹರೀಶ ಮೇಸ್ತ್ರಿ, ಉಪಾಧ್ಯಕ್ಷ ಗಣೇಶ ಮೇಸ್ತ್ರಿ, ಕೋಶಾಧಿಕಾರಿ ಪ್ರಭಾಕರ ಗಾಣಿಗ ಉಪಸ್ಥಿತರಿದ್ದರು.
(ಪೋಟೋ  ಗುರುತು ಪತ್ರ)

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com