ಭಗವಂತನಿಗೆ ಅರ್ಪಣೆ ಮಾಡಿಕೊಂಡಾಗ ಆಯುಷ್ಯ ವೃದ್ಧಿ: ಸ್ವರ್ಣವಲ್ಲಿ

 ಗಂಗೊಳ್ಳಿ: ಭಗವಂತನಿಗೆ ತನ್ನನ್ನು ತಾನು ಅರ್ಪಣೆ ಮಾಡಿಕೊಂಡಾಗ ಆಯುಷ್ಯ, ಯಶಸ್ಸು ಜೀವನದಲ್ಲಿ ವೃದ್ದಿಯಾಗುತ್ತದೆ. ಬದುಕು ಒಂದು ಜಟಕಾ ಬಂಡಿ, ವಿಧಿ ಅದರ ಸಾಹೇಬ ಎನ್ನುವಂತೆ ನಾವು ವಿಧಿಗೆ ಶರಣಾಗಬೇಕು. ಪ್ರಸನ್ನತೆ ಮನುಷ್ಯನ ಆರೋಗ್ಯದ ಗುಟ್ಟು. ಅರ್ಪಣಾ ಮನೋಭಾವ, ಪ್ರಸನ್ನತೆ ಹಾಗೂ ಆತ್ಮವಿಶ್ವಾಸ ಹೊಂದಿರುವವರು ದೀರ್ಘಾಷಿÂಗಳಾಗುತ್ತಾರೆ ಎಂದು ಶಿರಸಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು
     ಅವರು ಗಂಗೊಳ್ಳಿಯ ಗಂಗೊಳ್ಳಿಯ ಶ್ರೀರಾಮ ಮಂದಿರದ ಬಳಿಯ ದೇವರುಮನೆಯಲ್ಲಿ ಜರಗಿದ ಗಂಗೊಳ್ಳಿಯ ಜಿ.ಡಿ.ತಿಮ್ಮಪ್ಪ ಸೇರೇಗಾರ್‌ ಅವರ ಸಹಸ್ರ ಚಂದ್ರದರ್ಶನ ಶಾಂತಿಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಗೈದರು.
  ಬೈಂದೂರು ಮಾಜಿ ಶಾಸಕ ಹಾಗೂ ವಿಶ್ವ ರಾಮಕ್ಷತ್ರಿಯ ಮಹಾ ಸಂಘ (ರಿ) ಇದರ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ ವಹಿಸಿದ್ದರು.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ|ಎಚ್‌.ವಿ.ನರಸಿಂಹಮೂರ್ತಿ ಶುಭಾಸಂಶನೆ ಗೈದರು.
 ಮುಖ್ಯ ಅತಿಥಿಗಳಾಗಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ನಿವೃತ್ತ ಬ್ಯಾಂಕ್‌ ಅಧಿಕಾರಿ ಜಿ.ಮಹಾಬಲ ಶೇರುಗಾರ್‌, ಉದ್ಯಮಿ ಎಚ್‌.ಗಣೇಶ್‌ ಕಾಮತ್‌, ಜಿ.ಪಂ.ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಶಾರ್ಕೆ ಎಸ್‌.ರಾಮಕೃಷ್ಣ ಭಟ್‌, ಜಿ.ಡಿ.ತಿಮ್ಮಪ್ಪ ಶೇರೇಗಾರ್‌ ದಂಪತಿಗಳು ಉಪಸ್ಥಿತರಿದ್ದರು.
   ಈ ಸಂದರ್ಭದಲ್ಲಿ ಗಂಗೊಳ್ಳಿಯ ದೇವರು ಸುಬ್ರಾಯ ಶೇರುಗಾರ್‌ ಅವರಿಗೆ ಗೌರವ ಸಮರ್ಪಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಗಂಗೊಳ್ಳಿಯ ವೇದಮೂರ್ತಿ ಲಕ್ಷ್ಮಿನಾರಾಯಣ ಭಟ್‌ ಅವರನ್ನು ಸಮ್ಮಾನಿಸಲಾಯಿತು.
   ಬಿಜೂರು ರಾಮಕೃಷ್ಣ ಶೇರೇಗಾರ ಕುಂದಾಪುರ ಅವರು ಸ್ವಾಗತಿಸಿದರು. ಲೇಖಕ ಕೊ.ಶಿವಾನಂದ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶ್ಮಿರಾಜ್‌ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com