ಕೆರಾಡಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ., ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ-ಉಡುಪಿ,  ರಕ್ತನಿಧಿ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಆಡಳಿತ ಇವರ ಆಶ್ರಯದಲ್ಲಿ ವರಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜು ಕೆರಾಡಿ, ಜೆಸಿಐ ಚಿತ್ತೂರು-ಮಾರಣಕಟ್ಟೆ, ಶಶಿಧರ ಮಿತ್ರವೃಂದ ಮೂಡುಗಲ್ಲು-ಕೆರಾಡಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕೆರಾಡಿ, ವರಸಿದ್ಧಿ ಯುವ ವೇದಿಕೆ ಕೆರಾಡಿ, ಸ್ಪೂರ್ತಿ ಯುವ ವೇದಿಕೆ ಹೊಸೂರು, ಗ್ರಾಮ ಅರಣ್ಯ ಸಮಿತಿ ಕೆರಾಡಿ, ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಕೆರಾಡಿ ಇವರ ಸಹಕಾರದೊಂದಿಗೆ ಡಿ.25ರಂದು ಕೆರಾಡಿ ವರಸಿದ್ಧಿ ವಿನಾಯಕ ಪ.ಪೂ.ಕಾಲೇಜು ವಠಾರದಲ್ಲಿ ನಡೆಯಿತು.
ಕೆರಾಡಿಯ ವರಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮಿಣ ಪ್ರದೇಶದಲ್ಲಿಯೂ ಕೂಡಾ ರಕ್ತದಾನದ ಬಗ್ಗೆ ಅರಿವು ಮೂಡಬೇಕಾಗಿದೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜೀವ ಉಳಿಸುವ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ರಾಘವೇಂದ್ರ ನೆಂಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜಯ ಸಿ.ಕೋಟ್ಯಾನ್, ಕೆ.ಎಂ.ಸಿ ರಕ್ತನಧಿ ಮಣಿಪಾಲ ಇದರ ಡಾ|ಸುಧಾ ಭಟ್, ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜ ಶೆಡ್ತಿ, ಪತ್ರಕರ್ತ ಯು.ಎಸ್.ಶೆಣೈ, ತಾ.ಪಂ.ಮಾಜಿ ಸದಸ್ಯ ನಾಗಪ್ಪ ಕೊಠಾರಿ, ವರಸಿದ್ಧಿ ವಿನಾಯಕ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಸುಭಾಶ್ಚಂದ್ರ ಶೆಟ್ಟಿ, ಸ್ಪೂರ್ತಿ ಯುವ ವೇದಿಕೆ ಹೊಸೂರು ಇದರ ಪ್ರವೀಣ ಶೆಟ್ಟಿ, ನ್ಯಾಯವಾದಿ ಪ್ರಸನ್ನಕುಮಾರ್ ಶೆಟ್ಟಿ, ಜೆಸಿಐ ಚಿತ್ತೂರು ಮಾರಣಕಟ್ಟೆ ಅಧ್ಯಕ್ಷ ಉದಯ ಜಿ.ಪೂಜಾರಿ, ಮೂಡಗಲ್ಲು ಶಶಿಧರ ಮಿತ್ರವೃಂದದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕೆರಾಡಿ ಒಕ್ಕೂಟದ ಅಧ್ಯಕ್ಷ ವೀರೇಂದ್ರ ನಾಯಕ್, ವರಸಿದ್ಧಿ ಯುವ ವೇದಿಕೆ ಅಧ್ಯಕ್ಷ ಸತೀಶ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಅಧ್ಯಕ್ಷ ಮಂಜು ಕೊಠಾರಿ, ಕೆರಾಡಿಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಸ್ಥಾಪಕಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ  ಬೆಂಗಳೂರು ಆಸರೆ ಪೌಂಡೇಶನ್ ವತಿಯಿಂದ ಸಮಾಜ ಸೇವಕ ರಾಘವೇಂದ್ರ ನೆಂಪು, ಜೇಸಿಐ ವಲಯ ತರಬೇತುದಾರ ರಾಧಾಕೃಷ್ಣ ಕ್ರಮಾಧಾರಿ ಶೇಡಿಮನೆ ಅವರನ್ನು ಸನ್ಮಾನಿಸಲಾಯಿತು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಗೌರವಾಧ್ಯಕ್ಷ ರಾಜು ಶ್ರೀಯಾನ್ ಸ್ವಾಗತಿಸಿ ಉಪನ್ಯಾಸಕ ಆತ್ಮರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com