ಎಚ್‌ಐವಿ ಜಾಗೃತಿ ಯಕ್ಷಗಾನ ಪ್ರದರ್ಶನ

ಕೊಲ್ಲೂರು: ಎಚ್‌ಐವಿ ನಿಯಂತ್ರಣಕ್ಕೆ ಜನಜಾಗೃತಿಯೇ ಪರಿಹಾರವಾಗಿದ್ದು, ಜನರನ್ನು ಜಾಗೃತಗೊಳಿಸಲು ಯಕ್ಷಗಾನದಂತ ಕಲಾ ಮಾಧ್ಯಮಗಳು ಪರಿಣಾಮಕಾರಿಯಾಗಿದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತಾಧಿಕಾರಿ ಎಲ್.ಎಸ್. ಮಾರುತಿ ಹೇಳಿದರು.
   ಅವರು ಕರ್ನಾಟಕ ರಾಜ್ಯ ಎಡ್ರಿವೆನ್ಷನ್ ಸೊಸೈಟಿ ಬೆಂಗಳೂರು, ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮೂಕಾಂಬಿಕಾ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸಾಗರ ತಾಲೂಕಿನ ತುಮರಿ ಯಕ್ಷಬಳಗದ ಎಚ್‌ಐವಿ ಜಾಗೃತಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ಯಕ್ಷಗಾನ ಒಂದು ಸುಂದರ ಕಲೆ. ಈ ಕಲೆಯ ಮೂಲಕ ಜನ ಸಮುದಾಯಕ್ಕೆ ಅರಿವು ಮೂಡಿಸುತ್ತಿರುವ ಕಲಾವಿದರ ಶ್ರಮ ಶ್ಲಾಘನೀಯ. ಇಂಥ ಕಾರ್ಯಕ್ರಮಗಳನ್ನು ಜನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯಕ್ಷಬಳಗದ ಮುಖ್ಯಸ್ಥ ಟಿ.ಎಂ. ಶೇಷಗಿರಿ, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ರಮೇಶ್, ದೇವಳದ ಅರ್ಚಕ ಶಿವರಾಮ ಅಡಿಗ, ಅಧೀಕ್ಷಕ ರಾಮಕೃಷ್ಣ ಅಡಿಗ ಮತ್ತಿತರರು ಇದ್ದರು.
ಬಳಿಕ ಯಕ್ಷ ಬಳಗದಿಂದ ಸ್ವಾಸ್ಥ್ಯ ಸಂಕ್ರಾತಿ ಪ್ರಸಂಗವು ಪ್ರದರ್ಶನಗೊಂಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com