ಉದ್ಧೇಶಪೂರ್ವಕವಾಗಿ ಪ್ರಕರಣ ದಾಖಲು: ಖಂಡನೆ

ಕುಂದಾಪುರ: ವಾಸುದೇವ ಮುದೂರು ಹಾಗೂ ಇತರರ ವಿರುದ್ಧ ಉದ್ಧೇಶಪೂರ್ವಕವಾಗಿ ಜಾಮೀನು ರಹಿತ ಪ್ರಕರಣ ದಾಖಲಿಸಿದ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮವಾದ ) ಇದರ ಕುಂದಾಪುರ ತಾಲೂಕು ಸಂಚಾಲಕ ಗೋವಿಂದ ಮಾರ್ಗೋಳಿ ಖಂಡನೆ ವ್ಯಕ್ತಪಡಿಸಿದ್ದಾರೆ.

ದಲಿತರ ಕೃಷಿಗೆ ಮಂದಾಗಿರುವ ಭೂಮಿಯನ್ನು ಭೂ ಮಾಲಿಕರು ಸ್ವಾಧೀನ ಪಡಿಸಿಕೊಂಡಿದ್ದು, ಯಾವ ಇಲಾಖೆಯು ಕ್ರಮ ಕೈಗೊಳ್ಳದೇ ತಟಸ್ಥವಾಗಿರುತ್ತದೆ. ಇಲಾಖೆ ಅತಿಕ್ರಮಣ ಮಾಡಿದವರಿಗೆ ಬನ್ನೆಲುಬಾಗಿ ವ್ಯವಹರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯ ದ.ಸಂ.ಸ.ಸಂಚಾಲಕ ವಾಸುದೇವ ಮುದೂರು ಅವರನ್ನು ಭೂ ಮಾಲಿಕರು ಗೃಹ ಸಚಿವರ ಮಟ್ಟದದಲ್ಲಿ ಸಂಘಟಿತ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ವಾಸುದೇವ ಮುದೂರು ಅವರಿಗೆ ಸತ್ಯಕ್ಕೆ ದೂರವಾದ ಅರೋಪ ಗಳನ್ನು ಮಾಡಿ ಪೊಲೀಸ್‌ ಇಲಾಖೆಯ ಮೂಲಕ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ತಿಳಿಸಿರುವುದಲ್ಲದೇ ಸದ್ರಿ ಭೂಮಿಯ ಸತ್ಯತೆಯ ಬಗ್ಗೆ ತನಿಖೆ ನಡೆಸಿ ದಲಿತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com