ಭಟ್ಕಳ-ತೋಕೂರು ಡಿಎಂಯು ರೈಲು ಮಂಗಳೂರು ತನಕ ವಿಸ್ತರಣೆ

ಕುಂದಾಪುರ: ಭಟ್ಕಳ-ತೋಕೂರು ನಡುವೆ ಓಡಾಡುತ್ತಿದ್ದ ಡಬ್ಬಲ್ ಮಲ್ಟಿಪಲ್ ಯೂನಿಟ್ ರೆಲು ಮಂಗಳೂರು ತನಕ ವಿಸ್ತರಣೆಗೊಂಡಿದ್ದು ಶೀಘ್ರದಲ್ಲಿಯೇ ಓಡಾಟ ಆರಂಭಿಸಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. 

ಸಂಜೆ ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿದ ಕುಂದಾಪುರ ರೆಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಕುಂದಾಪುರ ರೆಲ್ವೆ ನಿಲ್ದಾಣದ ರೆಲ್ವೆ ವೇಳಾಪಟ್ಟಿಯ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ವಿಸ್ತರಣೆ ಬಗ್ಗೆ ರೆಲ್ವೆ ಸಚಿವರು ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಓಡಾಟಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದ್ದು ಸಚಿವರ ಅಂಕಿತಕ್ಕೆ ಬಾಕಿ ಇದೆ. ಸಚಿವರ ಸಮ್ಮತಿ ದೊರಕಿದ ತಕ್ಷಣ ಮಹತ್ವದ ಇಂಟರ್‌ಸಿಟಿ ಟ್ರೆನ್ ಓಡಾಟ ಆರಂಭಿಸಲಿದೆ ಎಂದು ಅವರು ಹೇಳಿದರು.ಯಶವಂತಪುರ-ಕಾರವಾರ ರೆಲು ನಿಧಾನಗತಿಯ ಓಡಾಟದ ಬಗ್ಗೆ ಈಗಾಗಲೆ ರೆಲ್ವೆ ನಿಗಮದ ಗಮನಸೆಳೆಯಲಾಗಿದೆ. ಹಾಸನ-ಅರಸಿಕೆರೆ ಮಾರ್ಗದಲ್ಲಿ ನಡೆಯುತ್ತಿರುವ ಭೂಸ್ವಾೀನ ಪ್ರಕ್ರಿಯೆಯಿಂದ ರೆಲು ಓಡಾಟ ನಿಧಾನಗತಿ ಕಂಡುಕೊಳ್ಳುತ್ತಿದೆ ಎಂಬ ಸಂಗತಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ ರೆಲ್ವೆ ಸಚಿವರು ಹಾಗೂ ನಿಗಮಕ್ಕೆ ತಿಳಿಸಲಾಗಿದ್ದು ಭೂಸ್ವಾೀನತೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಅದಾದ ತಕ್ಷಣವೇ ಯಶವಂತಪುರ-ಕಾರವಾರ ರೆಲು ಓಡಾಟಕ್ಕೆ ವೇಗ ನೀಡುವ ಭರವಸೆ ದೊರಕಿದೆ. ಸಾಕಷ್ಟು ರೆಲುಗಳು ಓಡಾಟ ನಡೆಸುತ್ತಿರುವ ಕೊಂಕಣ ರೆಲ್ವೆ ಮಾರ್ಗವನ್ನು ಡಬ್ಬಲ್ ಟ್ರ್ಯಾಕ್‌ಗೆ ಒಳಪಡಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಇದಕ್ಕೆ ಸಹಮತ ದೊರಕಿದೆ. ಅದೇ ರೀತಿ ಕುಂದಾಪುರ ರೆಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಹೋರಾಟ ಫಲಪ್ರದವಾಗುವ ಸೂಚನೆ ಲಭಿಸಿದೆ. ಮುಂದಿನ 15 ದಿನದಲ್ಲಿ ಚಿಕ್ಕಮಗಳೂರಿಗೆ ಕೇಂದ್ರ ರೆಲ್ವೆ ಸಚಿವರು ಭೇಟಿ ನೀಡಲಿದ್ದು ಈ ಭಾಗದ ರೆಲ್ವೆಗೆ ಸಂಬಂಸಿದ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ರೆಲ್ವೆ ವೇಳಾಪಟ್ಟಿ ಮಾಹಿತಿ ಕರಪತ್ರ ತಯಾರಿಗೆ ಸಹಕರಿಸಿದ ಉದ್ಯಮಿ ಅರುಣ್ ಕಲ್‌ಗುಜ್ಜೀಕರ್ ಅವರನ್ನು ಗೌರವಿಸಲಾಯಿತು. 

ಕುಂದಾಪುರ ರೆಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಹುಬ್ಬಳ್ಳಿ ನೆರುತ್ಯ ವಲಯ ರೆಲ್ವೆ ಸಲಹಾ ಮಂಡಳಿಯ ಸದಸ್ಯ ರಾಧಾಕಷ್ಣ ಶೆಣೆ, ನೈಋತ್ಯ ರೆಲ್ವೆ ವಿಭಾಗೀಯ ಸಲಹಾ ಮಂಡಳಿ ಸದಸ್ಯ ಸಚ್ಚಿದಾನಂದ ಶೆಟ್ಟಿ, ದಕ್ಷಿಣ ವಲಯ ರೆಲ್ವೆ ಸಲಹಾ ಮಂಡಳಿ ಸದಸ್ಯ ಗಣೇಶ್ ಪುತ್ರನ್, ರೆಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ವಿವೇಕ್ ನಾಯಕ್, ಸಮಿತಿಯ ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ಕಿಶನ್‌ಕುಮಾರ್ ಕೆಂಚನೂರು,ಶ್ರೀಧರ ಪಿ.ಎಸ್., ಜೋಯ್ ಕೆ.ಕರ್ವಾಲೊ ಉಪಸ್ಥಿತರಿದ್ದರು. 

ರೈಲ್ವೆ ನಿಲ್ದಾಣ ಸಿಬ್ಬಂದಿಗಳ ವಿರುದ್ಧ ದೂರು: ಇಲ್ಲಿನ ರೆಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ಕರೆ ಮಾಡಿದರೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಕರೆಯನ್ನು ಸ್ವೀಕರಿಸುವುದೇ ಇಲ್ಲ ಎಂದು ರೆಲ್ವೆ ಪ್ರಯಾಣಿಕರು ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರಲ್ಲಿ ದೂರಿದಾಗ ಖುದ್ದು ಅವರೇ ರೆಲ್ವೆ ನಿಲ್ದಾಣಕ್ಕೆ ಕರೆ ಮಾಡಿದರು. ಆದರೆ ಅವರ ಕರೆ ಸ್ವೀಕರಿಸಲೇ ಇಲ್ಲ. ಬಹುಹೊತ್ತು ಸಂಪರ್ಕ ಸಾಸಲು ಅವರು ಪ್ರಯತ್ನಿಸಿದರಾದರೂ ರೆಲ್ವೆ ನಿಲ್ದಾಣದಲ್ಲಿ ಕರೆ ಸ್ವೀಕರಿಸುವ ವ್ಯವಧಾನವೇ ಇಲ್ಲದ್ದನ್ನು ಕಂಡ ಗರಂ ಆದ ಸಂಸದರು ಸ್ಥಳದಲ್ಲಿಯೇ ಕೊಂಕಣ ರೆಲ್ವೆಯ ಆಡಳಿತ ವ್ಯವಸ್ಥಾಪಕರನ್ನು ನೇರ ಸಂಪರ್ಕಿಸಿ ವಿಷಯ ತಿಳಿಸಿದರು. ಅದಾದ ತಕ್ಷಣವೇ ಸಂಸದರ ಮೊಬೆಲ್‌ಗೆ ರೆಲ್ವೆ ನಿಲ್ದಾಣ ಸಿಬ್ಬಂದಿಗಳಿಂದ ಕರೆ ಬಂದಿದೆ. ಪ್ರಯಾಣಿಕರು ಮಾಹಿತಿ ಅಥವಾ ಇನ್ಯಾವುದೋ ತುರ್ತು ಸಂದರ್ಭಗಳಲ್ಲಿ ಕರೆ ಮಾಡುತ್ತಾರೆ. ಕರೆ ಸ್ವೀಕರಿಸುವ ಭಾವನೆ ಇಟ್ಟುಕೊಳ್ಳಿ ಎಂದು ಸಂಸದರು ಸಲಹೆ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com