ಶೈಕ್ಷಣಿಕ ಸಮ್ಮೇಳನ ಸಮಾರೋಪ

ಬೈಂದೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಹಮ್ಮಿಕೊಂಡ ಶೈಕ್ಷಣಿಕ ಸಮ್ಮೇಳನ ಮತ್ತು ಕೌಶಲಪೂರ್ಣ ಶಿಕ್ಷಣ ಕಾರ್ಯಾಗಾರ - 2014ರ ಸಮಾರೋಪ ಸಮಾರಂಭವು ಜೆ.ಎನ್.ಆರ್. ಕಲಾಮಂದಿರದಲ್ಲಿ ನಡೆಯಿತು. 
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ವಲಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಈಶ್ವರ. ಮಹದೇವ ಮಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯದರ್ಶಿ ಎಸ್. ಬಾಲಯ್ಯ ಶೇರುಗಾರ್, ನಿಕಟ ಪೂರ್ವಾಧ್ಯಕ್ಷ ಹೆಚ್. ಪ್ರಭಾಕರ, ಖಜಾಂಚಿ ಶ್ರೀಮತಿ ಕೆ. ಶಾರದ, ವಲಯ ಸಂಘದ ಪ್ರತಿನಿಧಿಗಳಾದ ಶ್ರೀ. ಟಿ. ಅಣ್ಣಪ್ಪ ಶೇರುಗಾರ್, ಶ್ರೀ.ಎಮ್.ನಿತ್ಯಾನಂದ, ಶ್ರೀ. ಶಶಿಧರ ಗಾಂವ್ಕರ್, ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಐ. ನಾರಾಯಣ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾಧಿಕಾ ಟಿ. ಶಿರೂರು, ಶ್ರೀ. ಗೋಪಾಲ ಶೇರುಗಾರ್ ಮರವಂತೆ, ಶ್ರೀ. ಕೃಷ್ಣಪ್ಪ ಶೆಟ್ಟಿ ಯಡ್ತರೆ, ಶ್ರೀ. ಅಶೋಕ್ ಭಟ್ ಕಡಿಕೆ ನಾಡಾ, ಬಿ.ಆರ್. ಸರ್ವೋತ್ತಮ ಭಟ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ಪ್ರತಿನಿಧಿ ಅರುಣ ಕುಮಾರ್ ಶೆಟ್ಟಿ ವಂದಿಸಿದರು. ಶ್ರೀ. ಗಣಪತಿ ಹೋಬಳಿದಾರ್ ಮತ್ತು ಶ್ರೀ ರಾಘವೇಂದ್ರ ದಡ್ಡು ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com