ಧರ್ಮ ಆಚರಣೆಯಿಂದ ನಾಡು ಬೆಳೆಯಲು ಸಾಧ್ಯ: ಶ್ರೀ ವಿಶ್ವಸಂತೋಷಭಾರತಿ ಸ್ವಾಮೀಜಿ

ಬೈಂದೂರು: ಭಾರತವು ದೇವರುಗಳ ತವರೂರಾಗಿದ್ದು, ಇಲ್ಲಿನ ಸನಾತನ ಸಂಪ್ರದಾಯ, ಸಂಸ್ಕೃತಿಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿವೆ. ಸಂಸ್ಕೃತಿಯಿಂದ ನಾಡು ಬೆಳಗುತ್ತದೆ. ಹಾಗೆಯೇ ಧರ್ಮದ ಆಚರಣೆಯಿಂದ ನಾಡು ಬೆಳೆಯುತ್ತದೆ. ಯಾವ ದೇಶದಲ್ಲಿ ಧರ್ಮದ ಆಚರಣೆ ಕುಸಿಯುತ್ತದೆಯೋ, ಆ ದೇಶ ಕುಸಿಯುತ್ತದೆ ಎಂದು ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಹರಿಹರ ಪೀಠಾಪತಿ ಶ್ರೀ ವಿಶ್ವಸಂತೋಷಭಾರತಿ ಸ್ವಾಮೀಜಿ ಹೇಳಿದರು.

ಉಪ್ಪುಂದ ಮಹಾಬಲೇಶ್ವರ ನಂದನವನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. 

ದೇಶದಲ್ಲಿ ಶಿಸ್ತುಬದ್ಧ ಆರಾಧನೆಯಿದ್ದರೆ ಅದು ಅಯ್ಯಪ್ಪ ವ್ರತಧಾರಿಗಳು ಮಾತ್ರ. ಇದರಿಂದಾಗಿ ಭಗವತ್ ಶಕ್ತಿಯನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ವ್ರತಧಾರಿಗಳು ಮಾನವೀಯತೆ ಹಾಗೂ ಪ್ರೀತಿಯನ್ನು ಅಳವಡಿಸಿಕೊಂಡು ಶಿಷ್ಟಾಚಾರ ಪರಿಪಾಲಿಸಿದಾಗ ಅಯ್ಯಪ್ಪ ಸ್ವಾಮಿ ಒಲಿಯುತ್ತಾರೆ ಎಂದರು. 

ಹಿರಿಯ ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಕಾರಿ ಡಾ. ಎಚ್.ವಿ. ನರಸಿಂಹ ಮೂರ್ತಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ಗ್ರಾಪಂ ಅಧ್ಯಕ್ಷ ಜಗನ್ನಾಥ, ಜಿಪಂ ಮಾಜಿ ಸದಸ್ಯ ಮದನ ಕುಮಾರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ನವೀನಚಂದ್ರ ಉಪ್ಪುಂದ, ನಂದನವನ ಶ್ರೀ ಮಹಾಬಲೇಶ್ವರ ದೇವಳದ ಆಡಳಿತ ಮೊಕ್ತೇಸರ ರಾಜೀವ ಭಟ್ ಉಪಸ್ಥಿತರಿದ್ದರು. ಬಾಬು ಗುರುಸ್ವಾಮಿ ಸ್ವಾಗತಿಸಿದರು. ರಾಮಕೃಷ್ಣ ದೇವಾಡಿಗ ಹಾಗೂ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com