ನಕ್ಸಲ್‌ಸಕ್ರಿಯ ಪ್ರದೇಶಗಳಿಗೆ ಡಿವೆಎಸ್ಪಿ ಭೇಟಿ

ಕುಂದಾಪುರ: ಇಲ್ಲಿನ ಡಿವೆಎಸ್ಪಿ ಸಿ.ಬಿ.ಪಾಟೀಲ್ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಿಗೆ ವಿಶೇಷ ಭೇಟಿ ನೀಡಿದರು. ಬಸ್ರಿಬೇರು, ಜಡ್ಕಲ್, ಮುದೂರು, ಕೊಲ್ಲೂರು, ಉದಯನಗರ ಮೊದಲಾದ ನಕ್ಸಲ್ ಸಕ್ರಿಯ ಅತಿ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ನಕ್ಸಲ್ ಚಟುವಟಿಕೆ ಕುರಿತು ಮಾಹಿತಿ ಪಡೆದರು. 

ಪ್ರದೇಶದ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆಯೂ ಗ್ರಾಮಸ್ಥರಿಂದ ಮಾಹಿತಿ ಪಡೆದ ಅವರು ಜನರಿಗೆ ಧೆರ್ಯ ತುಂಬಿದರು. ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಹಾಗೂ ವಿಶೇಷ ಪೊಲೀಸ್ ಪಡೆಯ ಸಿಬ್ಬಂದಿಗಳು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com