ರಾಹುಲ್’ಗಾಂಧಿಯನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಡಿ: ದಿಗ್ವಿಜಯ್ ಸಿಂಗ್

ನವದೆಹಲಿ: ಬಹುತೇಕ ಕಾಂಗ್ರೆಸ್ ನಾಯಕರೆಲ್ಲರೂ ಯುವ ನೇತಾರ ರಾಹುಲ್ ಗಾಂಧಿಯನ್ನೇ ಪ್ರಧಾನಿಯನ್ನಾಗಿ ಘೋಷಿಸಬೇಕೆಂದು ಪಟ್ಟುಹಿಡಿದಿರುವ ಸಂದರ್ಭದಲ್ಲೇ ಇತ್ತ ತನ್ನದೇ ಆದ ವಯಕ್ತಿಕ ಅಭಿಪ್ರಾಯ ಮಂಡಿಸಿರುವ ಪ್ರಭಾವಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಚುನಾವಣೆಗೆ ಮುನ್ನವೇ ಪ್ರಧಾನಿ ಅಭ್ಯರ್ಥಿಯನ್ನ ಅಧಿಕೃತವಾಗಿ ಘೋಷಿಸುವುದು ಕಾಂಗ್ರೆಸ್ ಸಂಪ್ರದಾಯಕ್ಕೆ ತದ್ವಿರುದ್ಧವಾಗಿದ್ದು, ಇದೀಗಲೇ ತಮ್ಮ ಪ್ರಧಾನಿ ಅಭ್ಯರ್ಥಿಯನ್ನ ಘೋಷಿಸಬಾರದೆಂದು ಬೋಧನೆ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕ ಗಾಂಧಿಯವರು ಮಂಗಳವಾರ ಕಾಂಗ್ರೆಸ್ ಮುಖಂಡರಾದ ಅಹಮದ್ ಪಟೇಲ್, ಜನಾರ್ದನ್ ದ್ವಿವೇದಿ, ಜೈರಾಮ್ ರಮೇಶ್, ಮಧುಸೂದನ್ ಮಿಸ್ಟ್ರಿ, ಮೋಹನ್ ಗೋಪಾಲ್ ಮತ್ತು ಅಜಯ್ ಮಕೇನ್ ಮುಂತಾದ ಪ್ರಮುಖರೊಂದಿಗೆ ಸಭೆ ಕರೆದು ಮಾತನಾಡಿದ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನವರಿ 17 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಾಸಭೆ ನಡೆಯಲಿರುವ ಮುನ್ನವೇ ಇದೀಗ ಪೂರ್ವಬಾವಿ ಸಭೆ ಕರೆದು ರಾಹುಲ್ ಗಾಂಧಿಯವರನ್ನು ಕಾಂಗ್ರೆಸಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಭಿಸುವಂತೆ ಮಾತುಕತೆ ನಡೆಯುತ್ತಿರುವ ವರ್ತಮಾನವನ್ನಾಧರಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಭಿಸುವ ಸಲುವಾಗಿ ಸಾರ್ವಜನಿಕ ಸಂಪರ್ಕ ಕ್ಷೇತ್ರದ ಜಾಗತಿಕ ಪರಿಣಿತರನ್ನು ಕರೆಸುವ ನಿಟ್ಟಿನಲ್ಲಿ 500 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಕೇಳಿಬಂದಿರುವ ವರದಿಯನ್ನ ನಿರಾಕರಿಸಿರುವ ಅವರು, ಅದೆಲ್ಲಾ ಸುಮ್ಮನೆ ಸುಳ್ಳಿನ ಕಂತೆಗಳಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com