ನಟಿ ಶ್ವೇತಾ ಪಂಡಿತ್‌ಗೆ ಫೇಸ್‌ಬುಕ್‌ ಹುಡುಗನಿಂದ ಬೆದರಿಕೆ

ಬೆಂಗಳೂರು: ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ನಟಿ ಶ್ವೇತಾ ಪಂಡಿತ್‌ ಗೆ ಯುವಕನೊಬ್ಬ ಅಸಭ್ಯವಾಗಿ ಕಾಮೆಂಟ್‌ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಅವರು ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ. 
      ಅಪರಿಚಿತ ಹುಡುಗ ಅಸಭ್ಯವಾಗಿ ವರ್ತಿಸಿರುವುದಲ್ಲದೆ ತನ್ನ ಕಾಲು ಮುರಿಯುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಶ್ವೇತಾ ಪಂಡಿತ್‌ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಸುದ್ದಿಮೂಲಗಳ ಜತೆ ಮಾತನಾಡಿದ ಶ್ವೇತಾ ಪಂಡಿತ್‌, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬ ಫೇಸ್‌ಬುಕ್‌ ಮೂಲಕ ನನಗೆ ಅಸಭ್ಯ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದ. ಹೀಗೆಲ್ಲಾ ಮಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಪ್ರತಿಕ್ರಿಯಿಸಿದ್ದೆ. ಆದರೆ, ಆತ ನನಗೆ ಉಪ್ಪಾರಪೇಟೆ ಪೊಲೀಸರು ಗೊತ್ತು, ರೌಡಿಗಳೂ ಗೊತ್ತು. ಯಾರಿಗೆ ಬೇಕಾದರೂ ಹೇಳು ಅಂತ ಪುನಃ ಕಾಮೆಂಟ್‌ ಮಾಡಿದ್ದಾನೆ ಎಂದು ಹೇಳಿದರು. 
     ಫೇಸ್‌ಬುಕ್‌ನಲ್ಲಿ ನನಗೆ ತುಂಬಾ ಜನ ಫ್ರೆಂಡ್ಸ್‌ ಇದ್ದಾರೆ. ಅಭಿಮಾನಿಗಳೂ ಇದ್ದಾರೆ. ಯಾರಿಂದಲೂ ತೊಂದರೆ ಆಗಿಲ್ಲ. ಆದರೆ, ಆ ಹುಡುಗ ಮಾತ್ರ ಕೆಟ್ಟದಾಗಿ ಕಾಮೆಂಟ್‌ ಮಾಡುವ ಮೂಲಕ ತಲೆನೋವು ತಂದಿದ್ದಾನೆ. ಒಂದು ದಿನ ಮಾತ್ರ ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದ. ಆದರೆ, ಯಾವಾಗ ನಾನು ಫೇಸ್‌ಬುಕ್‌ನಲ್ಲಿ ಅವನ ಬಗ್ಗೆ ಬರೆದೆನೋ ಆಗಿನಿಂದ ಯಾವುದೇ ಕಾಮೆಂಟ್‌ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಪುನಃ ಏನಾದರೂ ಅಸಭ್ಯವಾಗಿ ವರ್ತಿಸಿದರೆ ಪೊಲೀಸರಿಗೆ ದೂರು ನೀಡುವುದಾಗಿ ಶ್ವೇತಾ ಪಂಡಿತ್‌ ಎಚ್ಚರಿಸಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com