ಜೀವನದ ಪ್ರತಿಯೊಂದು ಕ್ಷಣವು ಅಮೂಲ್ಯ

ಗಂಗೊಳ್ಳಿ: ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ನಮ್ಮ ಬದುಕಿನಲ್ಲಿ ವಿಚಾರದ ಬಗ್ಗೆ ಸ್ಪಷ್ಟತೆ, ಸಾಧಿಸುವ, ಸಬಲೀಕರಣದ ಮತ್ತು ಸ್ವೀಕರಿಸುವ ಗುಣ ಇರಬೇಕು. ಪ್ರತಿಯೊಬ್ಬರೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ ಹೇಳಿದರು. 

ಗಂಗೊಳ್ಳಿಯ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಗಂಗೊಳ್ಳಿ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಪಂಚಗಂಗಾವಳಿ ಮತ್ತು ಮೇಲ್‌ಗಂಗೊಳ್ಳಿ ಒಕ್ಕೂಟದ ಪದಗ್ರಹಣದ ಸಮಾರಂಭದಲ್ಲಿ ಅವರು ಮಾತನಾಡಿದರು. ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗತಿ ವೇದಿಕೆ ತ್ರಾಸಿ ವಲಯ ಅಧ್ಯಕ್ಷ ಬಿ.ರಾಘವೇಂದ್ರ ಪೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಿಕಲಚೇತನರಿಗೆ ಮಹಮ್ಮದ್ ಇಬ್ರಾಹಿಂ ಗೋವಾ, ದಿವಾಕರ ಎನ್.ಖಾರ್ವಿ ಹಾಗೂ ಡಾ.ಎಲ್.ಎಚ್.ಮಂಜುನಾಥ ಅವರು ನೀಡಿದ ಸಹಾಯಧನವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. 

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಗಂಗೊಳ್ಳಿ ಶ್ರೀ ಸಿದ್ಧಿ ಫ್ರೀಜರ್ಸ್‌ನ ಮ್ಯಾನೇಜರ್ ಎಂ.ಎಂ. ಸುವರ್ಣ, ಸಾಹಿತಿ ಕೊ.ಶಿವಾನಂದ ಕಾರಂತ್, ಮೆಸೂರು ಅಬ್ದುಲ್ ನಜೀರ್ ಸಾಹೇಬ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿನೋದ ಗಂಗೊಳ್ಳಿ ಶುಭ ಹಾರೆಸಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹೇಮಲತಾ ಹೆಗ್ಡೆ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಕೃಷ್ಣ ಪೂಜಾರಿ, ಜ್ಯೋತಿ, ನೂತನ ಅಧ್ಯಕ್ಷರುಗಳಾದ ನಾಗರಾಜ ಖಾರ್ವಿ, ಇಂದಿರಾ ಬಿಲ್ಲವ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com