ಹೆಂಡತಿಗೆ ಗಂಡನ ಸಂಬಳ ತಿಳಿಯುವ ಹಕ್ಕಿದೆ: ಕೇಂದ್ರೀಯ ಮಾಹಿತಿ ಆಯುಕ್ತ

ಹೊಸದಿಲ್ಲಿ: ಸರಕಾರಿ ನೌಕರರ ಹೆಂಡತಿಯರಿಗೆ ಗಂಡನ ಸಂಬಳ ಎಷ್ಟೆ ಎಂದು ತಿಳಿದುಕೊಳ್ಳುವ ಹಕ್ಕು ಇದೆ. ಮಾತ್ರವಲ್ಲ ಆರ್‌ಟಿಐ ಕಾಯಿದೆಯಡಿಯಲ್ಲಿ ಸರಕಾರಿ ಕಚೇರಿಗಳು ಕೂಡ ನೌಕರರ ಸಂಬಳವನ್ನು ಬಹಿರಂಗಪಡಿಸಬೇಕೆಂದು ಕೇಂದ್ರೀಯ ಮಾಹಿತಿ ಆಯುಕ್ತರು ಹೇಳಿದ್ದಾರೆ.

ಮನೆ ಖರ್ಚು ನಿಭಾಯಿಸಿಕೊಂಡು ಹೋಗಲು ಗಂಡನಿಗೆ ಎಷ್ಟು ಸಂಬಳ ಬರುತ್ತದೆ ಎದು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ನಾರಿಗಿದೆ. ಮಾತ್ರವಲ್ಲದೆ ಗಂಡನ ಸಂಬಳದ ವಿವರಗಳನ್ನು ಕೂಡ ಹೆಂಡತಿ ತಿಳಿದುಕೊಳ್ಳಬಹುದು. ಸರಕಾರಿ ನೌಕರರ ಸಂಬಳದ ಮಾಹಿತಿ ಮೂರನೇ ಪಕ್ಷದ ಮಾಹಿತಿಯಾಗುವುದಿಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್‌ 4(1)(ಬಿ)(ಎಕ್ಸ್‌) ಪ್ರಕಾರ ಸ್ವಇಚ್ಚೆಯಿಂದ ಬಹಿರಂಗಪಡಿಸಬಹುದು ಎಂದು ಮಾಹಿತಿ ಆಯುಕ್ತ ಎಂ. ಶ್ರೀಧರ್‌ ಆಚಾರ್ಯಲು ಅಭಿಪ್ರಾಯಪಟ್ಟಿದ್ದಾರೆ.

ಜನರು ಕೊಟ್ಟ ತೆರಿಗೆ ಹಣದಿಂದ ಸರಕಾರಿ ಅಧಿಕಾರಿಗಳು ಸಂಬಳ ಪಡೆದುಕೊಳ್ಳುವುದರಿಂದ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಸಂಬಳದ ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ. ಅಲ್ಲದೆ ಸಂಸಾರ ರಥ ಸುಗಮವಾಗಿ ಸಾಗಲು ಮನೆವಾರ್ತೆ ನೋಡಿಕೊಳ್ಳುವ ಹೆಂಡತಿಗೆ ಸಂಬಳದ ಎಲ್ಲ ವಿವರಗಳನ್ನು ತಿಳಿಸುವುದು ಅವಶ್ಯಕ ಎಂದಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com