ಇಂಗ್ಲಿಷ್‌ನೊಂದಿಗೆ ಕನ್ನಡವೂ ಬೆಳೆಯಲಿ: ಹಂಸಲೇಖ

ಕೋಟ: ಬೆಳೆಯುವ ಭಾಷೆಯನ್ನು ಅಪಾಯದಲ್ಲಿದೆ ಎನ್ನುವುದು ತಪ್ಪು. ಇಂಗ್ಲಿಷ್ ಭಾಷೆಯಂತೆ ಕನ್ನಡವೂ ಕೂಡ ಇನ್ನೂ ಹೊಸ ಪದಗಳ ಸೇರ್ಪಡೆಯ ಮೂಲಕ ಬೆಳೆಯಬೇಕಾ­ಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.­ಉಪೇಂದ್ರ ಸೋಮಯಾಜಿ ಅವರ ಮನೆಗೆ ಅವರು  ಭೇಟಿ ನೀಡಿ ಮಾತನಾಡಿದರು.

ಕನ್ನಡ ಎಲ್ಲೂ ಹಾಳಾಗುತ್ತಿಲ್ಲ, ಬದಲಿಗೆ ಕನ್ನಡ ಸಾಕಷ್ಟು ಬೆಳೆದಿದೆ ಇನ್ನೂ ಬೆಳೆಯುತ್ತಿದೆ. ಪಂಪನ ಕಾಲದ ಕನ್ನಡಕ್ಕೂ ಕುಮಾರವ್ಯಾಸನ ಕನ್ನಡಕ್ಕೂ ಈಗಿನ ಸಾಹಿತಿಗಳ ಕನ್ನಡಕ್ಕೂ ಸಾಕಷ್ಟು ಉತ್ತಮವಾದ ಬದಲಾವಣೆಗಳನ್ನು ಕಾಣಬಹುದೆ ಹೊರತು ಎಲ್ಲಿಯೂ ಭಾಷೆ ಹಾಳು ಮಾಡಿದನ್ನು ಕಾಣಲು ಸಾಧ್ಯವಿಲ್ಲ.

ಕನ್ನಡದ ಬೆಳವಣಿಗೆ ನಿಟ್ಟಿ­ನಲ್ಲಿ ಕ.ಸಾ.ಪ ಮತ್ತು ಹಂಸಲೇಖ ದೇಸಿ ಕಾಲೇಜು ಸಂಯುಕ್ತ ಆಶ್ರಯ­ದಲ್ಲಿ ರಾಜ್ಯಾದ್ಯಂತ ಕ.ಸಾ.ಪ ಜಿಲ್ಲಾ, ತಾಲ್ಲೂಕು  ಮತ್ತು ಹೋಬಳಿ ಘಟಕ­ಗಳನ್ನು ಸೇರಿಸಿಕೊಂಡು ಮಕ್ಕಳಿಂದ ಮಕ್ಕಳಿಗಾಗಿ ನಾಟಕವನ್ನು ರಚಿಸಿ ಪ್ರದರ್ಶಿಸುವ ಕಿರು ನಾಟಕೋತ್ಸ­ವವನ್ನು ಆಯೋಜಿಸಿ ನಾಟಕ ಕಲೆಯ ಮೂಲಕ ಮಕ್ಕಳಲ್ಲಿ ಕನ್ನಡದ ಕುರಿತು ಆಸಕ್ತಿ ಮತ್ತು ಅಭಿಮಾನ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸುಮಾರು ೩ಸಾವಿರ ನಾಟಕಗಳನ್ನು ಪ್ರದರ್ಶನ ನಡೆಸುವ ಇರಾದೆ ಇದ್ದು, ಈ ನಿಟ್ಟಿನಲ್ಲಿ ಕ.ಸಾ.ಪವನ್ನು ಸಂಪರ್ಕಿಸಿ ಸಮಿತಿಯನ್ನು ರಚಿಸಿ ಮುಂದಿನ ಕಾರ್ಯಕ್ರಮ ಅನುವಾಗುವ ನಿಟ್ಟಿನಲ್ಲಿ ಈವರೆಗೆ ಸುಮಾರು ೧೦ ಜಿಲ್ಲೆಗಳನ್ನು ಸಂದರ್ಶಿಸಿರುವುದಾಗಿ ತಿಳಿಸಿದರು.

ಪತ್ನಿ ಲತಾ ಹಂಸಲೇಖ, ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್, ರಾಮದೇವ ಐತಾಳ್, ರಾಮಚಂದ್ರ ಐತಾಳ, ಅಭಿಲಾಶ ಸೋಮಯಾಜಿ, ಎಮ್.ಎನ್.ಮಧ್ಯಸ್ಥ ಮಹಾಲಕ್ಷ್ಮೀ, ಹಂಸಲೇಖ ದೇಸಿ ಕಾಲೇಜಿನ ಲತಾ, ಸಾಕ್ಷರ್ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com