ಜಾನಪದ ಪದ್ಯ ಜ್ಞಾನಕ್ಕೆ ಪೂರಕ: ಗಣಪತಿ ಶ್ರೀಯಾನ್‌

ಕುಂದಾಪುರ:  ಹಿರಿಯರು ಸೃಷ್ಟಿಸಿದ ಜಾನಪದ ಪದ್ಯಗಳಿಂದ ನಾವು ಕಲಿಯುವಂತಹ ವಿಷಯಗಳು ಜಾಸ್ತಿ ಇದೆ. ಇವುಗಳನ್ನು ಉಳಿಸಿ ಬೆಳಸುವಲ್ಲಿ ಗ್ರಾಮಿಣ ಯುವಕ ಮಂಡಲಗಳ ಪಾತ್ರ ದೊಡ್ಡದು. ತಾಲ್ಲೂಕಿನ ಎಲ್ಲ ಯುವಕ ಹಾಗೂ ಯುವತಿ ಮಂಡಲ ಕಚೇರಿ ಕೋಣೆ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಭ್ಯ ಸರ್ಕಾರಿ ಭೂಮಿ­ಯಲ್ಲಿ  ಸ್ಥಳ ಮಂಜೂರು ಮಾಡಲು ಪ್ರಯತ್ನಿಸುವು­ದಾಗಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಹೇಳಿದರು.

ಇಲ್ಲಿಗೆ ಸಮೀಪದ ಕುಂಭಾಶಿ ವಿನಾಯಕ ಸಭಾಗೃಹದಲ್ಲಿ ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಉಡುಪಿ ನೆಹರು ಯುವ ಕೇಂದ್ರ, ಗೋಪಾಡಿ ಯುವಕ ಹಾಗೂ ಸಹಾನ ಯುವತಿ ಮಂಡಲ, ಕೋಟೇಶ್ವರ ರೋಟರಿ ಕ್ಲಬ್ ಹಾಗೂ ಜ್ಞಾನ ಭಾರತಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ‘ವಿಷಯಾಧಾರಿತ ಶಿಕ್ಷಣ ಹಾಗೂ ಜಾಗೃತಿ’ ಕಾರ್ಯ­ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀಜಾಡಿ ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರ ಪ್ರತಿನಿಧಿ ನರಸಿಂಹ ಗಾಣಿಗ, ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ, ವಿನಾಯಕ ಸಭಾಗೃಹ ವ್ಯವಸ್ಥಾಪಕ ರವಿರಾಜ್ ಉಪಾಧ್ಯ, ಯುವಕ ಮಂಡಲ ಅಧ್ಯಕ್ಷ  ಶ್ರೀಪತಿ ಉಪಾಧ್ಯ, ಬ್ರಹ್ಮಾವರ ರುಡ್ಸೆಟ್ ಸಂಸ್ಥೆ ಉಪನ್ಯಾಸಕ ಕರುಣಾಕರ್ ಜೈನ್, ತಲ್ಲೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿವೇಕ್, ಕೋಟೇಶ್ವರ ವಿಜಯ ಬ್ಯಾಂಕ್ ಪ್ರಬಂಧಕ ಸುನೀಲ್ ಪೂಜಾರಿ, ಅಯುರ್ವೇದ ವೈದ್ಯ ಸೂರ್ಯನಾರಾಯಣ ಸ್ವಾಮೀಜಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಉದ್ಯೋಗ, ಬ್ಯಾಂಕಿಂಗ್, ಗ್ರಾಮ ಪಂಚಾಯತಿ ಸೌಲಭ್ಯ, ಅಯುರ್ವೇದ ಔಷಧ ಮತ್ತು ವಿಷಯಾಧಾರಿತ ಶಿಕ್ಷಣ ಹಾಗೂ ಜಾಗೃತಿ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು. ಶ್ರೀಪತಿ ಉಪಾಧ್ಯ ಸ್ವಾಗತಿಸಿದರು. ನರಸಿಂಹ ಗಾಣಿಗ ಪ್ರಾಸ್ತವಿಸಿದರು. ರಾಘವೇಂದ್ರ ಗೋಪಾಡಿ ಕಾರ್ಯಕ್ರಮ ನಿರೂಪಿಸಿದರು. ಮಾಧವ ಆಚಾರ್ಯ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com