ಅಧಿಕಾರಿಗಳ ಪಾಲ್ಗೊಳ್ಳುವಿಕೆ ಅಗತ್ಯ: ಡಿ.ಸಿ

ಉಡುಪಿ: ಕೋಟೇಶ್ವರದಲ್ಲಿ ಜನವರಿ ೨೫ ಮತ್ತು ೨೬ ರಂದು ನಡೆಯುವ ಜಿಲ್ಲಾ ಕೃಷಿ ಉತ್ಸವದ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಸಕ್ರಿಯ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಹೇಳಿದರು.ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕೃಷಿ ಉತ್ಸವ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಉತ್ಸವಕ್ಕೆ ಆಗಮಿಸುವ ರೈತರಿಗೆ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಬೇಕು ಮತ್ತು ಕೃಷಿ ಉತ್ಸವ ನಡೆಯುವ ೨ ದಿನಗಳ ಕಾಲ ಆ ಮಳಿಗೆಯಲ್ಲಿ ಸಂಬಂದಪಟ್ಟ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದು, ಮಾಹಿತಿ ನೀಡಬೇಕು ಎಂದರು.

ವಿಚಾರಗೋಷ್ಠಿಗಳಿಗೆ ತಾಂತ್ರಿಕ ನೆರವು ನೀಡುವಂತೆ ಬ್ರಹ್ಮಾವರ ಕೃಷಿ ಕೇಂದ್ರದ ಅಧಿಕಾರಿಗಳಿಗೆ  ಹಾಗೂ ಉತ್ಸವದ ಪ್ರಚಾರಕ್ಕೆ ಅಗತ್ಯವಿರುವ ಕರಪತ್ರ, ಪೋಸ್ಟರ್ಸ್‌ ಮತ್ತು ಬ್ಯಾನರ್ ಗಳನ್ನು ಅಗತ್ಯವಿರುವ ಕಡೆ ತಲುಪಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು. ಪ್ರತಿ ದಿನ ಸುಮಾರು ೨೦,೦೦೦ ರೈತರು ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಆಗಮಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗುವುದು ಎಂದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ. ಕನಗವಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂತೋನಿ ಮರಿಯಾ ಇಮಾನ್ಯುವೆಲ್ ಉಪಸ್ಥಿತರಿದ್ದರು. ಕೃಷಿ ಉತ್ಸವ ತ್ವರಿತ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ: ಜಿಲ್ಲಾ ಕೃಷಿ ಉತ್ಸವ ಸಿದ್ದತೆ ಕುರಿತಂತೆ ರಚಿಸಲಾಗಿರುವ ಎಲ್ಲಾ ಸಮಿತಿ ಮತ್ತು ಉಪ ಸಮಿತಿಗಳು ಕೈಗೊಂಡಿರುವ  ತೀಮಾನಗಳನ್ನು  ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ತರುವಂತೆ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಅವರು ಸೂಚಿಸಿದರು.

ಕುಂದಾಪುರದ ತಾಲ್ಲೂಕು ಪಂಚಾಯಿತಿ  ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕೃಷಿ ಉತ್ಸವದ ಸಂಬಂಧ ರಚಿಸಿದ ವಿವಿಧ ಸಮಿತಿ ಮತ್ತು ಉಪ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಿತಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ಶೀಘ್ರದಲ್ಲಿ ಅನುಷ್ಟಾನಕ್ಕೆ ತರಬೇಕು ಎಂದರು.ಂದು ಜಿಲ್ಲಾದಿಕಾರಿಗಳು  ಕೃಷಿ ಉತ್ಸವದ ಅಮಂತ್ರಣ ಪತ್ರಗಳನ್ನು ಎಲ್ಲರಿಗೂ ತಲುಪುವುವಂತೆ ವ್ಯವಸ್ಥೆ ಮಾಡಲು  ಪಿಡಿಓ ಗಳು ಮತ್ತು ಗ್ರಾಮ ಕರಣಿಕರ ಸಭೆ  ಕರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಾಬು ಶೆಟ್ಟಿ ತಿಳಿಸಿದರು. 

ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಆರ್‌ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ,  ಉಪ ವಿಭಾಗಾಧಿಕಾರಿ  ಯೋಗೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com