ಕೊಲೆ ಯತ್ನ; ಆರೋಪಿಗಳ ದೋಷಮುಕ್ತಿ

ಕುಂದಾಪುರ: ತಾಲೂಕಿನ ಹೆಂಗವಳ್ಳಿ ಗ್ರಾಮದ ತೊಂಬತ್ತು ಬಳಿ ಕೆ.ಕೆ.ಚರಿಯನ್‌ ಎನ್ನುವವರನ್ನು ಕತ್ತಿಯಿಂದ ಕಡಿದು ಕೊಲ್ಲಲು ಪ್ರಯತ್ನಿಸಿದ , ಬ್ಯಾಂಕ್‌ವೊಂದರ ಮಾಜಿ ನೌಕರ ಜಯಪ್ರಕಾಶ್‌ ಹೆಗ್ಡೆ ಹಾಗೂ ಆವರ ಪತ್ನಿ ಗುಣವತಿ ಹೆಗ್ಡೆ ಅವರನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.

ಆರೋಪಿಗಳು ತಮ್ಮ ಜಾಗವನ್ನು ಕೆ.ಕೆ. ಚರಿಯನ್‌ಗೆ ಮಾರಾಟ ಮಾಡಿ, ನಂತರ ದಾರಿ ವಿಚಾರದಲ್ಲಿ ತಕರಾರು ತೆಗೆದು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ತೀವ್ರವಾಗಿ ಗಾಯಗೊಂಡ ಗಾಯಾಳುವನ್ನು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬದುಕಿಸಲಾಗಿತ್ತು. ಶಂಕರನಾರಾಯಣ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 307ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಮಾಡಲಾದ ಆರೋಪಣೆಗಳು ರುಜುವಾತಾಗದ ಕಾರಣ ಅವರುಗಳ ಬಿಡುಗಡೆಯಾಗಿದೆ. ಆರೋಪಿಗಳ ವಿರುದ್ಧ ಮಾಡಲಾದ ಆರೋಗಳು ರುಜುವಾತಾಗದ ಕಾರಣ ಅವರುಗಳನ್ನು ಬಿಡುಗಡೆಯಾಗಿದೆ. ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುಡೇìಶ್ವರ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com