ಡಿಕೆಶಿ, ಬೇಗ್ ಸೇರ್ಪಡೆಗೆ ರಾಹುಲ್ ಗಾಂಧಿ ಡೀಲ್: ಪ್ರಹ್ಲಾದ ಜೋಷಿ

ಕುಂದಾಪುರ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್, ರೋಷನ್ ಬೇಗ್ ಅವರ ಸಂಪುಟ ಸೇರ್ಪಡೆ ಹಿಂದೆ ರಾಹುಲ್ ಗಾಂಧಿ ನೇರ ಪಾತ್ರವಿದೆ. ರಾಹುಲ್ ಅವರೇ ನೇರ ಡೀಲ್ ನಡೆದಿದೆ. ಈ ಡೀಲ್ ಏನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಸವಾಲು ಹಾಕಿದ್ದಾರೆ. 

ಉಡುಪಿ ಮತ್ತು ಕುಂಭಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಂಕಿತರ ಸೇರ್ಪಡೆಯಿಲ್ಲ ಎಂದು ಮುಖ್ಯಮಂತ್ರಿ ಅಕಾರ ಉಳಿಸಲು ಹೈಕಮಾಂಡ್ ಓಲೈಕೆಯಲ್ಲಿ ತೊಡಗಿದ್ದಾರೆ ಎಂದರು. 

ಲೋಕಾಯುಕ್ತ ಆರೋಪದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದೆನ್ನುವ ನೆಲೆಯಲ್ಲಿ ರಾಷ್ಟ್ರೀಯ ನಾಯಕರು ನಿಲುವು ತೆಗೆದುಕೊಂಡಿದ್ದರು. ಡಿಕೆಶಿ, ಬೇಗ್ ಸಂಪುಟದಲ್ಲಿರುವುದು ಅವರ ರಕ್ಷಣೆಗೆ ಅಸ್ತ್ರವಾದೀತು ಎಂದು ಹೇಳಿದರು. 

17ರಂದು ರಾಷ್ಟ್ರೀಯ ಕಾರ್ಯಕಾರಿಣಿ: ಲೋಕಸಭೆ ಚುನಾವಣೆ ಸಿದ್ಧತೆ ನಿಟ್ಟಿನಲ್ಲಿ 24 ಜಿಲ್ಲಾ ಶಕ್ತಿ ಕೇಂದ್ರಗಳ ಸಭೆ ನಡೆದಿದೆ. ಫೆಬ್ರವರಿಯಲ್ಲಿ 28ಲೋಕಸಭಾ ಕ್ಷೇತ್ರಗಳಲ್ಲಿ ಸಭೆ ನಡೆಯಲಿದೆ. ಜ. 17 ರಂದು ದಿಲ್ಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಜರುಗಲಿದೆ. ಜ. 18, 19ರಂದು ಬಿಜೆಪಿ ರಾಷ್ಟ್ರೀಯ ಪದಾಕಾರಿಗಳ ಸಭೆಯಿದ್ದು ಹಿರಿಯ ಮುಖಂಡರಾದ ರಾಜನಾಥ್ ಸಿಂಗ್, ನರೇಂದ್ರ ಮೋದಿ, ಎಲ್.ಕೆ. ಆಡ್ವಾಣಿ ಮಾರ್ಗದರ್ಶನ ನೀಡಲಿದ್ದಾರೆ. ಮುಂದಿನ ಚುನಾವಣೆಯ ರಾಜಕೀಯ ತಂತ್ರಗಾರಿಕೆ ರೂಪಿಸಲಾಗುವುದು ಎಂದು ಹೇಳಿದರು ಜೋಷಿ. ಬಿಎಸ್‌ಆರ್ ಕಾಂಗ್ರೆಸಿನ ಶ್ರೀರಾಮುಲು ಪಕ್ಷ ಸೇರ್ಪಡೆ ನಿಟ್ಟಿನಲ್ಲಿ ಅಕೃತ ಮಾತುಕತೆ ನಡೆದಿಲ್ಲ ಎಂದರು. 

ಬಿಜೆಪಿ ತಪ್ಪಿನಿಂದ ಅಕಾರಕ್ಕೆ ಬಂದ ಕಾಂಗ್ರೆಸ್‌ನ ಆಡಳಿತದಿಂದ ಭ್ರಮನಿರಸನ ಹೊಂದಿದ ಜನತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಹೇಳಿದ ಜೋಷಿ, ಮೋದಿ ಪ್ರಧಾನಿಯಾದರೆ ಅದು ಈ ದೇಶದ ದುರಂತ ಎನ್ನಲು ಡಾ. ಸಿಂಗ್ ಯಾರು? ಕಾಂಗ್ರೆಸ್ ಭಿನ್ನಮತದಿಂದಾಗಿ ಮುಖ್ಯಮಂತ್ರಿಗೆ ಅಕಾರವಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು ಜೋಷಿ. 

ವಿಲೀನದಿಂದ ಒಳಿತು: ನಮ್ಮ ಹೋರಾಟ ಏನಿದ್ದರೂ ಕಾಂಗ್ರೆಸ್ ವಿರುದ್ಧ . ಒಟ್ಟಾಗಿ ಹೋದರೆ ರಾಜ್ಯಕ್ಕೆ ಒಳಿತು ಎಂಬ ನೆಲೆಯಿಂದ ಕೆಜೆಪಿ-ಬಿಜೆಪಿ ಒಂದಾಗಲಿದೆ. ಬಿಜೆಪಿ ಬೆಳವಣಿಗೆಯಲ್ಲಿ ಯಡಿಯೂರಪ್ಪ ಪಾತ್ರ ದೊಡ್ಡದು ಎಂದರು. 

ಪ್ರತಿಪಕ್ಷ ಸ್ಥಾನ ಚರ್ಚೆ ಆಗಿಲ್ಲ: ಕೆಜೆಪಿ-ಬಿಜೆಪಿ ವಿಲೀನದ ಬಗ್ಗೆ ಸ್ಪೀಕರ್‌ಗೆ ಪತ್ರ ನೀಡಿದ್ದೇವೆ. ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಬಗ್ಗೆ ಈ ತನಕ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಈ ಸಂದರ್ಭ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಕೆ. ಉದಯ ಕುಮಾರ್ ಶೆಟ್ಟಿ, ಪಿ. ವಿಲಾಸ್ ನಾಯಕ್ ಉಪಸ್ಥಿತರಿದ್ದರು. 

ಕಳಂಕಿತರಿಗೆ ಟಿಕೆಟಿಲ್ಲ: ಪಕ್ಷಕ್ಕೆ ನಿಷ್ಠೆ, ಜನ ಸಂಪರ್ಕ, ಗೆಲ್ಲುವ ಸಾಧ್ಯತೆ, ಇಮೇಜ್ ಆಧಾರದಲ್ಲಿ ಟಿಕೆಟ್ ಕೊಡುತ್ತೇವೆ. ತನಿಖೆಯಲ್ಲಿರುವವರ ಹೊರತು, ಸಿದ್ಧ ಆರೋಪ ಉಳ್ಳವರಿಗೆ(ಕಳಂಕಿತರಿಗೆ)ಟಿಕೆಟಿಲ್ಲ. ಯಡಿಯೂರಪ್ಪ: ಕೇಂದ್ರ ನಾಯಕರದ್ದೇ ತೀರ್ಮಾನ: ಯಡಿಯೂರಪ್ಪ ಜನಮಾನಸದ ನಾಯಕ, ಸ್ಥಾನಮಾನ ಏನಿದ್ದರೂ(ಕೇಂದ್ರ ರಾಜಕೀಯಕ್ಕೆ ಯಡಿಯೂರಪ್ಪ ಅವರನ್ನು ಕಳುಹಿಸುವುದು) ಕೇಂದ್ರ ನಾಯಕರೇ ಕೈಗೊಳ್ಳಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com