ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಸಮ್ಮಾನ

ಕುಂದಾಪುರ: ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗುತ್ತಿದ್ದು, ಮೇಳಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕಲಾವಿದರಕೊರತೆಯಿಂದ ಮೇಳಗಳನ್ನು ನೆಡೆಸುವುದು ದುಸ್ಸಾಹಸದ ಕೆಲಸ ಎಂದು ಬೆ„ಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಹೇಳಿದರು.

ಅವರು ಕುಂದಾಪುರದಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ಪ್ರಂಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರ ಸಮ್ಮಾನ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಅಭಿನಂದನಾ ಭಾಷಣ ಮಾಡಿ ಮಾತನಾಡಿದ ಮಣಿಪಾಲ ಎಂ.ಐ.ಟಿ.ಪ್ರಾಧ್ಯಾಪಕ ಎಸ್‌.ವಿ.ಉದಯಕುಮಾರ ಶೆಟ್ಟಿ ಅವರು ಇಂದು ಹೆಚ್ಚಿನ ಯುವಕರು ಪ್ರಸಂಗರಚನೆಯಲ್ಲಿತೊಡಗಿರುವುದು ಆಶಾದಾಯಕ ಬೆಳವಣಿಗೆಯಾದರೂ ಕಳೆದ 30 ವರ್ಷಗಳಿಂದ ಮೌಲ್ಯಾಧಾರಿತ ಉತ್ತಮ ಸಾಹಿತ್ಯ ಛಂದಸ್ಸಿನಿಂದ ಕೂಡಿದ ಪ್ರಸಂಗಗಳನ್ನು ಯಕ್ಷಗಾನಕ್ಷೇತ್ರಕ್ಕೆ ನೀಡುತ್ತಾ ಬಂದ ಕಂದಾವರ ರಘುರಾಮ ಶೆಟ್ಟಿ ಅವರು ಯುವ ಪ್ರಸಂಗಕರ್ತರಿಗೆ ಆದರ್ಶಪ್ರಾಯರು ಎಂದು ಹೇಳಿದರು.

ಹೆ„ದರಾಬಾದಿನ ಉದ್ಯಮಿ ಕೃಷ್ಣಮೂರ್ತಿ ಮಂಜ, ಮೂಡುಬಿದರೆಯ ಉದ್ಯಮಿ ರಾಮಕೃಷ್ಣಆಚಾರ್ಯ, ಪೆರ್ಡೂರು ಮೇಳದ ವ್ಯವಸ್ಥಾಪಕ ವೈ.ಕರುಣಾಕರ ಶೆಟ್ಟಿ, ಉಪಸ್ಥಿತರಿದ್ದರು.

ಸುರೇಶ ಆಚಾರ್ಯ ಮಿತ್ರರಿಂದ ಕಾರ್ಯಕ್ರಮ ಆಯೋಜಿಸಿತ್ತು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ್ದರು. ು.ಹಕ್ಲಾಡಿ ಸುರೇಶ ಆಚಾರ್ಯ ವಂದಿಸಿದರು.

ಬಳಿಕ ಕಲಾವಿದರಿಂದ ಕಂದಾವರದವರ ಈ ಸಾಲಿನ ನೂತನ ಪ್ರಸಂಗ ಮಾತೃದೇವೋಭವ ಪ್ರಸಂಗದ ಪ್ರದರ್ಶನ ನೆರವೇರಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com