ರಾಷ್ಟ್ರ ಕಟ್ಟುವ ಹೊಣೆ ಯುವಕರದ್ದು

ಕುಂದಾಪುರ: ಪ್ರೀತಿ ವಿಶ್ವಾಸ, ನಂಬಿಕೆ, ತ್ಯಾಗ ಮನೋಭಾವನೆ ಹಾಗೂ ಮಾನ­ವೀಯ ಮೌಲ್ಯದ ಕೊರತೆಯಿಂದಾಗಿ  ಇಂದಿನ ವಿದ್ಯಾರ್ಥಿಗಳಲ್ಲಿ ಸದ್ಭಾವ- ಹಾಗೂ ಸದ್ಗುಣ  ಮರೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸಮಸ್ಯೆ­ಗಳನ್ನು ದಿಟ್ಟವಾಗಿ ಎದುರಿಸಲು ನೈತಿಕ ಮೌಲ್ಯ, ಆದರ್ಶ ವ್ಯಕ್ತಿತ್ವ ಮತ್ತು  ವೃತ್ತಿಪರ ಸಾಮರ್ಥ್ಯದ ಅವಶ್ಯಕತೆ ಇದೆ. ದೇಶ ಕಟ್ಟುವ ಜವಾಬ್ದಾರಿ ಯುವ ಸಮುದಾಯದ ಮೇಲೆ ಇದೆ ಎಂದು ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ನಿತ್ಯಾನಂದ ಬೈಂದೂರು ಹೇಳಿದರು.

ಇಲ್ಲಿಗೆ ಸಮೀಪದ ಹೊಂಬಾಡಿ- ಮಂಡಾಡಿ ವಿವೇಕೋದಯ ಅನು­ದಾನಿತ ಹಿರಿಯ ಪ್ರಾಥಮಿಕ ಶಾಲೆ­ಯಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎನ್ನುವ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವ­ಹಿಸಿದ್ದ ನಿವೃತ್ತ ಶಿಕ್ಷಕ ರಾಮಚಂದ್ರ ಉಪಾಧ್ಯಾಯ ಅವರು ಮಾನವ ಸಂಪ­ನ್ಮೂಲಗಳನ್ನು ಸದ್ಬಳಕೆ ಮಾಡಿ­ಕೊಂಡಾಗ ಯುವಕರು ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಿವೃತ್ತ ಸಹಾಯಕ ಪೊಲೀಸ್ ನಿರೀಕ್ಷಕ ಕಾಳಾವರ ಗಣಪಯ್ಯ ಶೆಟ್ಟಿ­ಗಾರ್‌, ಎನ್‌ಎಸ್‌ಎಸ್‌ ಯೋಜನಾಧಿ­ಕಾ­ರಿಗಳಾದ ಶಶಿಕಾಂತ ಹತ್ವಾರ್, ವಿಜಯ ಕುಮಾರ್ ಕೆ.ಎಂ., ಅರುಣ್ ಹಾಗೂ ಪ್ರಶಾಂತ್ ಹೆಗ್ಡೆ ಇದ್ದರು. ವಿದ್ಯಾರ್ಥಿಗಳಾದ ಅರ್ಚನಾ ಸ್ವಾಗ­ತಿ­ಸಿದರು. ದಿವ್ಯಾ ಪರಿಚಯಿಸಿದರು. ನೇತ್ರಾವತಿ ನಿರೂಪಿಸಿದರು. ನಾಗರಾಜ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com