ಫೆ.14- 16: ಮಲ್ಪೆ ಬೀಚ್‌ ಉತ್ಸವ

ಉಡುಪಿ: ಉಡುಪಿ ಉತ್ಸವ ಸಮಿತಿ ವತಿಯಿಂದ ಫೆ.14, 15 ಮತ್ತು 16ರಂದು ಮಲ್ಪೆಯ ಕಡಲತೀರದಲ್ಲಿ 'ಬೀಚ್‌ ಉತ್ಸವ' ಆಯೋಜಿಸಲಾಗಿದೆ ಎಂದು ಉಡುಪಿ ನಗರಸಭಾಧ್ಯಕ್ಷ ಯುವರಾಜ್‌ ತಿಳಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರಿಗಾಗಿ ಬೀಚ್‌ ಕಬಡ್ಡಿ, ಪುರುಷರ ವಾಲಿಬಾಲ್‌ ಹಾಗೂ ಮಹಿಳೆಯರಿಗೆ ತ್ರೋಬಾಲ್‌, ಹಗ್ಗ ಜಗ್ಗಾಟ, ಈಜುಸ್ಪರ್ಧೆ, ದೋಣಿ ಸ್ಪರ್ಧೆ, ಮೀನು ಹಿಡಿಯುವ ಸ್ಪರ್ಧೆ, ಮಡಲು ಹೆಣೆಯುವ ಸ್ಪರ್ಧೆ, ತಲೆಯ ಮೇಲೆ ಬುಟ್ಟಿ ಹೊತ್ತು ನಡೆಯುವ ಸ್ಪರ್ಧೆ, ಅಂತರ್‌ಕಾಲೇಜು ವಿದ್ಯಾರ್ಥಿಗಳ ನೃತ್ಯಸ್ಪರ್ಧೆ, ಮರಳುಶಿಲ್ಪ ರಚನೆ, ಗಾಳಿಪಟ ಪ್ರದರ್ಶನ ನಡೆಯಲಿದೆ. ಈ ಮೂರು ದಿನಗಳಲ್ಲಿ ಸಂಜೆ 6ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 'ಆಹಾರೋತ್ಸವ' ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಪ್ರಮೋದ್‌ ಮಧ್ವರಾಜ್‌ ಅವರು ಬೀಚ್‌ ಉತ್ಸವ ಲಾಂಛನ ಬಿಡುಗಡೆಗೊಳಿಸಿದರು. ಪೌರಾಯುಕ್ತ ಶ್ರೀಕಾಂತ ರಾವ್‌, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸಲಹೆಗಾರ ಯತೀಶ್‌ ಬೈಕಂಪಾಡಿ, ಸಂಚಾಲಕ ಪ್ರಶಾಂತ್‌ ಅಮೀನ್‌, ಸೆಲಿನಾ ಕರ್ಕಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com