ಮಾರಣಕಟ್ಟೆ: ಮಕರ ಸಂಕ್ರಮಣ ಉತ್ಸವ

ಮಾರಣಕಟ್ಟೆ : ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಉಭಯ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜ. 14ರಂದು ಮಹಾಮಂಗಳಾರತಿಯೊಡನೆ ಮಕರ ಸಂಕ್ರಮಣ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು.

ಜ. 14ರಿಂದ ಜ. 16ರ ತನಕ ನಡೆಯಲಿರುವ ಉತ್ಸವ ಕಾರ್ಯಕ್ರಮಕ್ಕೆ ದೇವಳದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸೀತಾರಾಮ ಶೆಟ್ಟಿ ಚಾಲನೆ ನೀಡಿದರು. ದೇವಳದ ಸಂಪ್ರದಾಯದಂತೆ 1ತಿಂಗಳು ದೇವಸ್ಥಾನದ ವಠಾರದಿಂದ ಹೊರಗಡೆ ಉಳಿದಿದ್ದ ದೇವಳದ ಚಿಕ್ಕು ಪಾತ್ರಿ ಅವರು ಚಕ್ರಾನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಆಗಮಿಸುವುದರೊಂದಿಗೆ ಅರ್ಚಕರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಖ್ಯಾತ ಉದ್ಯಮಿ ಕೃಷ್ಣಮೂರ್ತಿ ಮಂಜರು ಸಮೇತ ಅನೇಕ ಗಣ್ಯರು ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.

ಹೊಸ ಸೇವಂತಿಗೆ ಹೂವನ್ನು ಬುಟ್ಟಿಗಳಲ್ಲಿ ತಲೆ ಮೇಲೆ ಹೊತ್ತು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸುವ ಸಲುವಾಗಿ 40 ಸಾವಿರದಷ್ಟು ಭಕ್ತರು ಸರದಿಯಲ್ಲಿ ಶ್ರದ್ಧಾ, ಭಕ್ತಿಯಿಂದ ಸಾಗಿ ಶ್ರೀ ದೇವರ ದರ್ಶನ ಪಡೆದರು.

ಜ. 14ರಿಂದ ಜ. 16ರ ತನಕ ಮಕರ ಸಂಕ್ರಮಣ ಉತ್ಸವದ ಸಲುವಾಗಿ ನಡೆಯುವ ಗೆಂಡಸೇವೆ ಹಾಗೂ ಮಂಡಲಸೇವೆ ಮಹತ್ವ ಪಡೆದಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com