ನಾರಾಯಣಗುರು ಸ್ನೇಹ ಸಹಕಾರ ಮಹಿಳಾ ಮತ್ತು ಯುವಕ ಸಂಘಗಳ ಉದ್ಘಾಟನೆ

ಹೆಮ್ಮಾಡಿ: ಜನರಿಗೆ, ಸಮಾಜಕ್ಕೆ ಹಿತವನ್ನು ಬಯಸುವುದೇ ಸಂಘಟನೆಗಳ ಉದ್ದೇಶವಾಗಿರಬೇಕು. ಜಾತಿ-ಜನಾಂಗಗಳ ಸಂಘಟನೆಗಳ ಸ್ಥಾಪನೆ ಮತ್ತು ಸಮಾಜಮುಖೀ ಕಾರ್ಯದಿಂದ ಸರಕಾರದ ಭಾರ ಕಡಿಮೆಯಾಗುತ್ತದೆ. ಜಾತೀಯ ಮೇಲರಿಮೆಗಾಗಿ ಸಂಘಗಳನ್ನು ಕಟ್ಟಬಾರದು. ಸಂಘಟಿತರಾಗಿ ಸ್ವಜಾತಿಯ ಜನರ ಪ್ರಗತಿಗಾಗಿ ದುಡಿಯುವುದರೊಂದಿಗೆ ಬೇರೆ ಸಮುದಾಯದವರ ಅಭಿವೃದ್ಧಿಯ ಚಿಂತನೆಯನ್ನೂ ನಡೆಸುವುದು ಅಗತ್ಯ ಎಂದು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ನುಡಿದರು.

ಹೆಮ್ಮಾಡಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಆಶ್ರಯದಲ್ಲಿ ಇಲ್ಲಿನ ಜಯಶ್ರೀ ಸಭಾಭವನದಲ್ಲಿ ಶನಿವಾರ ಜರಗಿದ ಹೆಮ್ಮಾಡಿಯ ಬ್ರಹ್ಮಶ್ರೀ ನಾರಾಯಣಗುರು ಸ್ನೇಹ ಸಹಕಾರ ಮಹಿಳಾ ಮತ್ತು ಯುವಕ ಸಂಘಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸಂಪತ್ತು, ಅದಿಕಾರ, ಯೌವ್ವನ, ವಿದ್ಯೆ ಇವುಗಳೆಲ್ಲವೂ ಇರುವುದು ಇತರರ ಉದ್ಧಾರಕ್ಕಾಗಿ ಎಂದು ತಿಳಿದು ಪ್ರತಿಯೊಬ್ಬರೂ ಸೇವಾಮನೋಭಾವದಿಂದ ದುಡಿಯಬೇಕು. ಸಾಧನೆ, ಅನುಷ್ಠಾನ, ಕರ್ಮಗಳಿಂದ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಉದ್ಧಾರ ಸಾಧ್ಯ. ಶಿಕ್ಷಣ, ಸರ್ಟಿಫಿಕೇಟ್‌, ಹುದ್ದೆಯನ್ನು ಪಡೆಯುವುದು ಮಾತ್ರವೇ ಮುಖ್ಯವಲ್ಲ. ಸತ್ಯಧರ್ಮ, ನ್ಯಾಯನಿಷ್ಠೆ ಮುಂತಾದ ಗುಣಗಳನ್ನು ಹƒದಯದಲ್ಲಿ ಸೇರಿಸಿಕೊಂಡು ಶ್ರದ್ಧೆ, ವಿಶ್ವಾಸ ಮತ್ತು ನಂಬಿಕೆಯಿಂದ ಸಂಸ್ಕಾರಯುತ ಬದುಕು ಸಾಗಿಸಲು ಪ್ರಯತ್ನಿಸಬೇಕು. ಸಂಪತ್ತು, ಅದಿಕಾರ, ಸುಖ ಇವೆಲ್ಲವೂ ಕೈಬಿಟ್ಟುಹೋಗುವ ಮುನ್ನ ಸಂಸ್ಕಾರವಂತರಾಗಲು, ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸಂಘರ್ಷವಿಲ್ಲದ ಸಂಘಟನೆಯನ್ನು ಕಟ್ಟುವ ಚಿಂತನೆಯನ್ನು ನಡೆಸಬೇಕು ಎಂದು ಸ್ವಾಮೀಜಿಯವರು ನುಡಿದರು.

ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತƒತ್ವದ ಸರಕಾರವು ರಾಜ್ಯದ ಬಿಲ್ಲವ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಸ್ಥಾಪನೆಗೆ 2 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಕೋಟಿಚನ್ನಯ್ಯ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರುಗೊಳಿಸಿದೆ. ಸಾರ್ವತ್ರಿಕ ನೆಲೆಯಲ್ಲಿ ನಾರಾಯಣಗುರು ಜನ್ಮದಿನಾಚರಣೆಯನ್ನು ಆಚರಿಸುವುದು ಹಾಗೂ ಪಠ್ಯದಲ್ಲಿ ನಾರಾಯಣಗುರುಗಳ ಜೀವನಚರಿತ್ರೆಯನ್ನು ಸೇರಿಸಲು ಸರಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾರಂಭವನ್ನು ಉದ್ಘಾಟಿಸಿ ನೂತನ ಪದಾದಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಉದ್ಯಮಿ ಸುರೇಶ್‌ ಎಸ್‌. ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ಬೆ„ಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆ„ಂದೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ್‌ ಮಾಸ್ಟರ್‌, ನರಸಿಂಹ ಪೂಜಾರಿ ಪಡುಕೋಣೆ, ಉದ್ಯಮಿಗಳಾದ ಮಾಧವ ಪೂಜಾರಿ, ಉದಯ ಪೂಜಾರಿ ಕಟ್‌ಬೇಲೂ¤ರು, ಬಾಬು ಪೂಜಾರಿ, ಸುಬ್ಬ ಪೂಜಾರಿ, ಲಕ್ಷ್ಮಿà ಪೂಜಾರಿ ಕನ್ನಡಕುದ್ರು, ಕುಂದಾಪುರ ಬಿಲ್ಲವ ಸಂಘದ ಗಣೇಶ್‌ ಪೂಜಾರಿ, ತಾಲೂಕು ಬಿಲ್ಲವ ಮಹಿಳಾ ಘಟಕಾಧ್ಯಕ್ಷೆ ಹೇಮಾ ಬಿ. ಪೂಜಾರಿ, ತಾಲೂಕು ಶ್ರೀ ನಾರಾಯಣಗುರು ಯುವಕ ಸಂಘದ ಅಧ್ಯಕ್ಷ ರಾಘು ವಿಠಲವಾಡಿ, ವಿಠಲ ಪೂಜಾರಿ ಗೋಪಾಡಿ, ಆನಂದ ಪಿ. ಎಚ್‌., ಸುಧಾಕರ ಪೂಜಾರಿ ಕೋಟೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಯಕ್ಷಗಾನ ಕಲಾವಿದ ರಾಮ ಪೂಜಾರಿ, ಗೊಂಬೆಯಾಟ ಕಲಾವಿದ ನಾರಾಯಣ ಪೂಜಾರಿ ಮತ್ತು ರಾಜ್ಯಮಟ್ಟದ ಕ್ರೀಡಾಪಟು ರಮ್ಯ ಕನ್ನಡಕುದ್ರು ಅವರನ್ನು ಸಮ್ಮಾನಿಸಲಾಯತು.

ಹೆಮ್ಮಾಡಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಎಚ್‌. ಶಂಕರ ಪೂಜಾರಿ ಅವರು ಸ್ವಾಗತಿಸಿದರು. ನರಸಿಂಹ ಪೂಜಾರಿ ಬಸೂÅರು ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ರಾಜು ಪೂಜಾರಿ ವಂದಿಸಿದರು. ಸಭಾಕಾರ್ಯಕ್ರಮಕ್ಕೆ ಮುನ್ನ ಹೆಮ್ಮಾಡಿಯ ಶ್ರೀ ಲಕ್ಷ್ಮಿàನಾರಾಯಣ ದೇವಸ್ಥಾನದಿಂದ ಭವ್ಯ ಪುರಮೆರವಣಿಗೆ ನಡೆಯಿತು. ಸಭೆಯ ಬಳಿಕ ಸಾಗರದ ಮಹಾಮಾಯಿ ಯಕ್ಷಗಾನ ಮಂಡಳಿ ಕಲಾವಿದರಿಂದ ಲವಕುಶ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com