ಬೆಂಗಳೂರು ಬಿಲ್ಲವ ಅಸೋಸಿಯೇಶನ್ ನ 8ನೇ ಮಹಿಳಾ ಸಮಾವೇಶ

ಬೆಂಗಳೂರು:  ಇಲ್ಲಿನ ಬಿಲ್ಲವ ಅಸೋಸಿಯೇಶನ್ ಇದರ 8ನೇ ಮಹಿಳಾ ಸಮಾವೇಶ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯು ಬನ್ನೇರುಘಟ್ಟ ರಸ್ತೆಯಲ್ಲಿರುವ  ಸಂಘದ ನಿವೇಶನದಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್‌ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿಲ್ಲವ ಮಹಿಳಾ ಸಮಾವೇಶದಲ್ಲಿ ಭಾಗವಹಿಸುತ್ತಿರವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಬಿಲ್ಲವ ಸಮಾಜ ಕಷ್ಟ ಜೀವಿಗಳ ಸಮಾಜವಾಗಿದೆ. ಇಂತಹ ಸಮಾಜವು ಅಭಿವೃದ್ಧಿ ಹೊಂದಿದಲ್ಲಿ ಇಡೀ ದೇಶವೇ ಅಭಿವೃದ್ಧಿ ಹೊಂದುತ್ತದೆ. ಬಿಲ್ಲವ ಭವನದ ನಿರ್ಮಾಣಕ್ಕೆ ಸರಕಾರದ ವತಿಯಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.
      ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಶಾಸಕರಾದ ಮಾನ್ಯ ಸತೀಶ್ ರೆಡ್ಡಿಯವರು ಮಾತನಾಡಿ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಲ್ಲವ ಅಸೋಸಿಯೇಶನ್ ಹಲವಾರು ಜನೋಪಯೋಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ನನಗೂ ಹೆಮ್ಮೆಯ ವಿಷಯ ಎಂಬುದಾಗಿ ಪ್ರಶಂಸಿದರು. ಮಾನ್ಯ ಶಾಸಕರು ಶಾಸಕರ ನಿಧಿಯಿಂದ ಹಿಂದೆ ಘೋಷಿಸಿದ 20 ಲಕ್ಷ ಅನುದಾನವನ್ನು ಕೊಡಿಸುವುದಾಗಿ ತಿಳಿಸಿದರು. 

 ಇದೇ ಸಂದರ್ಭದಲ್ಲಿ ಸಮಾಜದವರೆ ಆದ ಮುಳಬಾಗಿಲು ಸಬ್ ಡಿವಿಜನ್‌ನ ಡಿ.ವೈ.ಎಸ್.ಪಿ ಶ್ರೀ ಸಿದ್ಧಪ್ಪರವರಿಗೆ, ಮಿಮಿಕ್ರಿಯಲ್ಲಿ ಹಲವಾರು ಪ್ರಶಸ್ತಿ ಪಡೆದ ಕುಮಾರಿ ಅಕ್ಷತಾ ಸ್ವರೂಪ್‌ರವರಿಗೆ ಹಾಗೂ ಸಂಘದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 4 ಮಹಿಳೆಯರನ್ನು ಸನ್ಮಾನಿಸಲಾಯಿತು.

  ಅಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀ ಎಂ. ವೇದಕುಮಾರ್‌ರವರು ಗಣ್ಯರನ್ನು ಸ್ವಾಗತಿಸಿದರು. ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಎಚ್. ಸಾಲಿಯಾನ್‌ರವರು ಪ್ರಾಸ್ತಾವಿಕ ಭಾಷಣ ಮಾಡಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಎನ್. ಸ್ವರೂಪ್ ಕುಮಾರ್, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಸಣ್ಣಪ್ಪ,  ಹಿರಿಯ ಉಪಾಧ್ಯಕ್ಷ ಭಾಸ್ಕರ್ ಸಿ. ಅಮೀನ್, ಉಪಾಧ್ಯಕ್ಷೆ ಶಾರದಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಕೋಶಾಧಿಕಾರಿ ಕೆ.ಡಿ.ಪೂಜಾರಿ, ಸಂಘಟನ ಕಾರ್ಯದರ್ಶಿ ಉದಯ್ ಕುಮಾರ್, ಜತೆ ಕಾರ್ಯದರ್ಶಿ ರಾಜೇಶ್ ಕುಮಾರ್, ಹಣಕಾಸು ಸಮಿತಿ ಅಧ್ಯಕ್ಷ ಯು.ಬಿ.ರವಿರಂಜನ್, ಬಿಲ್ಡಿಂಗ್ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಜಿ ಅಧ್ಯಕ್ಷರಾದ ವಾಸುದೇವ್ ಕೋಟ್ಯಾನ್ ಹಾಗೂ ಕೆ.ಜೆ.ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. 
ರಂಜಿತಾ ಬಾಲಕೃಷ್ಣ  ಹಾಗೂ ತಾರಾ ಪ್ರೇಮ್ ನಿರೂಪಿಸಿದರು. ರತ್ನಾ ಜಯರಾಮ್‌ರವರ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com