ಜಿಎಸ್‌ಬಿ ಡೈರೆಕ್ಟರಿ ಬಿಡುಗಡೆ

ಉಡುಪಿ: ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಪ್ರಕಟಿಸಿರುವ ಉಡುಪಿ ಜಿಲ್ಲಾ ಜಿಎಸ್‌ಬಿ ಡೈರೆಕ್ಟರಿ ಮತ್ತು ಜಿಎಸ್‌ಬಿ ಸಂಸ್ಕೃತಿ ಮತ್ತು ಸಂಸ್ಕಾರಗಳ ಮಾರ್ಗದರ್ಶಿ ಗ್ರಂಥ 'ಅನಂತ ಸೌರಭ'ವನ್ನು ಶ್ರೀಕಾಶೀ ಮಠಾಧೀಶರಾದ ಶ್ರೀಸುಧೀಂದ್ರತೀರ್ಥ ಸ್ವಾಮೀಜಿಯವರು ನವಿಮುಂಬಯಿ ವಾಶಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಬಿಡುಗಡೆಗೊಳಿಸಿದರು.

ಗ್ರಂಥದ ಸಂಪಾದಕ ವೇ|ಮೂ| ಚೇಂಪಿ ರಾಮಚಂದ್ರ ಅನಂತ ಭಟ್‌ ಅವರು ಜಿಎಸ್‌ಬಿ ಆಚಾರ ವಿಚಾರ ಅನುಷ್ಠಾನಗಳ ಪುಸ್ತಕ ಪ್ರಕಟನೆಯ ವಿವರ ನೀಡಿದರು. ವೇದಿಕೆ ಸಂಚಾಲಕ ಆರ್‌. ವಿವೇಕಾನಂದ ಶೆಣೈ ಅವರು ಜಿಎಸ್‌ಬಿ ಜನಗಣತಿ ಕಾರ್ಯ, ಮಾಹಿತಿ ಸಂಗ್ರಹಣೆ ಮತ್ತು ಪ್ರಕಟಣೆಯಲ್ಲಿ ಎದುರಾದ ಸವಾಲುಗಳು ಮತ್ತು ವಿಶಿಷ್ಟ ಅನುಭವಗಳನ್ನು ವಿವರಿಸಿದರು. ವೇದಿಕೆ ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಸ್ವಾಗತಿಸಿ ಪ್ರ.ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ ವಂದಿಸಿದರು. ವೇದಿಕೆ ಪದಾಧಿಕಾರಿಗಳು, ಮುಂಬೈ ಜಿಎಸ್‌ಬಿ ಗಣ್ಯರಾದ ಪ್ರಮೋದ್‌ ಕಾಮತ್‌, ಸಾಣೂರು ಮನೋಹರ ಕಾಮತ್‌, ರಘುನಂದನ್‌ ಕಾಮತ್‌ ಮುಂತಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com