ಸಾಲಿಗ್ರಾಮ ಗುರುನರಸಿಂಹ ರಥೋತ್ಸವ

ಸಾಲಿಗ್ರಾಮ : ಶ್ರೀ ಗುರುನರಸಿಂಹ ದೇವರ ವಾರ್ಷಿಕ ಮಹಾರಥೋತ್ಸವ ಗುರುವಾರ ವಿಜೃಭಣೆಯಿಂದ ನೆರವೇರಿತು.

ಬೆಳಗ್ಗೆ 10.45ಕ್ಕೆ ರಥಾರೋಹಣ, ಸಂಜೆ 6ಕ್ಕೆ ರಥಾವರೋಹಣ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ವಿಶೇಷ ಪಾನಕ ವ್ಯವಸ್ಥೆ, ಅನ್ನಸಂತರ್ಪಣೆ, ಪನಿವಾರ ವಿತರಣೆ ಸಹಿತ ಹಲವು ಕಾರ್ಯಕ್ರಮಗಳು ದಾನಿಗಳ ನೆರವಿನಿಂದ ನಡೆದವು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಕಾರಂತ ಉತ್ಸವದ ನೇತೃತ್ವ ವಹಿಸಿದ್ದರು. ಆಡಳಿತ ಮಂಡಳಿ ಮುಖ್ಯಸ್ಥ ವಿ. ಭಾಸ್ಕರ ನಾವಡ, ಆನಂದರಾಮ ಮಧ್ಯಸ್ಥ, ವೈ. ಸದಾರಾಮ ಹೇಳೆì, ಯಜ್ಞನಾರಾಯಣ ಹೇಳೆì, ಆನಂತಪದ್ಮನಾಭ ಐತಾಳ, ಎಚ್‌. ಧರ್ಮರಾಯ ಹಂದೆ, ಬಿ. ನಾಗರಾಜ, ಎನ್‌. ಕೃಷ್ಣ ಹೊಳ್ಳ ಉಪಸ್ಥಿತರಿದ್ದರು.

ದೇವಾಲಯದ ತಂತ್ರಿಗಳಾದ ವೇ|ಮೂ| ಯಜ್ಞನಾರಾಯಣ ಸೋಮಯಾಜಿ, ಜ್ಯೋತಿಷಿಗಳಾದ ವೇ|ಮೂ| ರತ್ನಾಕರ ಸೋಮಯಾಜಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com