ಬೃಹತ್‌ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶ

ಉಡುಪಿ: ಕಲ್ಯಾಣಪುರ - ನೇಜಾರು ಮೈದಾನದಲ್ಲಿ ಜ. 26ರಂದು ನಡೆಯಲಿರುವ ಬೃಹತ್‌ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶದಲ್ಲಿ ಯುವ ವಿಚಾರ ಗೋಷ್ಠಿ ಮತ್ತು ಮಹಿಳಾ ವಿಚಾರ ಗೋಷ್ಠಿಗಳು ನಡೆಯಲಿವೆ.

ಸಮಾವೇಶದ ಉದ್ಘಾಟನಾ ಸಮಾರಂಭದ ಅನಂತರ ಅಪರಾಹ್ನ 12ರಿಂದ 1ರ ವರೆಗೆ ನಡೆಯಲಿರುವ ಯುವ ವಿಚಾರ ಗೋಷ್ಠಿಯಲ್ಲಿ 'ಯುವಜನರ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು' ಎನ್ನುವ ವಿಷಯದ ಮೇಲೆ ಮಂಗಳೂರು ಮೆ| ಭಾರತ್‌ ಬೀಡಿ ವರ್ಕ್ಸ್ ಪ್ರ„.ಲಿ. ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ ಜಿ. ಪೈ ಮತ್ತು ಓಮ್ನಿಸಿಸ್‌ ಟೆಕ್ನಾಲಿಜಿಸ್‌ನ ನಿರ್ದೇಶಕ ಮೂಲ್ಕಿ ಅತುಲ್‌ ಕುಡ್ವ ಅವರು ವಿಚಾರ ಮಂಡಿಸುವರು. ಮಂಗಳೂರು ಕೊಡಿಯಾಲ್‌ ಖಬರ್‌ ಕೊಂಕಣಿ ಪಾಕ್ಷಿಕ ಸಂಪಾದಕ ಎಂ. ವೆಂಕಟೇಶ್‌ ಬಾಳಿಗಾ ಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡುವರು.

ಅಪರಾಹ್ನ 2ಕ್ಕೆ ಮಹಿಳಾ ವಿಚಾರ ಗೋಷ್ಠಿಯಲ್ಲಿ 'ಸಮಾಜ ಸೇವೆಯಲ್ಲಿ ಮಹಿಳೆಯರ ಪಾತ್ರ' ಎನ್ನುವ ವಿಷಯದ ಮೇಲೆ ಮಂಗಳೂರು ಕ್ರಿಯಾಶೀಲ ಸಮಾಜ ಚಿಂತಕಿಯರಾದ ಪ್ರಭಾ ಕುಡ್ವ ಮತ್ತು ಸತ್ಯಭಾಮ ಕಾಮತ್‌ ಅವರು ವಿಚಾರಗಳನ್ನು ಮಂಡಿಸಲಿದ್ದು, ಮಂಗಳೂರು ವಿ.ವಿ.ಯ ಆಂಗ್ಲ ಭಾಷಾ ಪ್ರೊಫೆಸರ್‌ ಡಾ| ಕಿಶೋರಿ ನಾಯಕ್‌ ಕೆ. ಅವರು ಗೋಷ್ಠಿಯ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com