ಮನೆಯಂಗಳಕ್ಕೆ ನುಗ್ಗಿದ ಚಿರತೆ

ಕುಂದಾಪುರ: ತಾಲೂಕಿನ ಹುಣ್ಸೆಮಕ್ಕಿ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಶುಕ್ರವಾರ ರಾತ್ರಿ ಚಿರತೆ ಮನೆಯಂಗಳಕ್ಕೆ ನುಗ್ಗಿದ ಘಟನೆ ನಡೆದಿದೆ. ಇಲ್ಲಿನ ಕೃಷ್ಣ ಪ್ರಭು ಎಂಬವರ ಮನೆಯಂಗಳಕ್ಕೆ ನುಗ್ಗಿದ ಚಿರತೆಯನ್ನು ಮನೆಯವರು, ನೆರೆಯವರು ಸೇರಿ ಓಡಿಸಿದ್ದಾರೆ. ಪಟಾಕಿ, ಗರ್ನಲ್ ಸಿಡಿಸಿ ಚಿರತೆಯನ್ನು ಸನಿಹದ ಕಾಡಿಗೆ ಅಟ್ಟಿದ್ದಾರೆ. ವರ್ಷದ ಹಿಂದೆ ಇದೇ ಪರಿಸರದಲ್ಲಿ ಕಾರ್ಮಿಕನೊಬ್ಬನ ಮೇಲೆ ಚಿರತೆ ಎರಗಿದ ಘಟನೆಯ ಬಳಿಕ ಇಲ್ಲಿ ಮಗದೊಮ್ಮೆ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

 ಹುಣ್ಸೆಮಕ್ಕಿ, ಗುಡ್ಡೆಯಂಗಡಿ ಸೇರಿದಂತೆ ಹಲವೆಡೆ ಚಿರತೆ ಕಾಟ ವಿಪರೀತಗೊಂಡಿದ್ದು ಭಯದಿಂದ ಬದುಕುವಂತಾಗಿದೆ. ಸಂಬಂಧಿತ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಹುಣ್ಸೆಮಕ್ಕಿ ನಾಗರಿಕರು ಆಗ್ರಹಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com