ನೂತನ ಹೋಂಡಾ ಸಿಟಿ ಕಾರು ಬಿಡುಗಡೆ

ಮಂಗಳೂರು: ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್‌ (ಎಚ್‌ಸಿ,ಎಲ್‌)ನ ನಾಲ್ಕನೇ ತಲೆಮಾರಿನ ನೂತನ ಹೋಂಡಾ ಸಿಟಿ ಕಾರನ್ನು ಪಟೇಲ್‌ ಕಾರ್ ಪ್ರೈವೇಟ್‌ ಲಿಮಿಟೆಡ್‌ನ‌ ನಿರ್ದೇಶಕ ವಿನೋದ್‌ ಬಿ. ಪಟೇಲ್‌ ನಗರದ ಕೊಟ್ಟಾರ ಚೌಕಿಯ ಅಧಿಕೃತ ಮಾರಾಟಗಾರರಾದ ಪೆನಿನ್ಸುಲಾರ್‌ ಹೋಂಡಾ ಶೋರೂಂನಲ್ಲಿ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಸೀನಿಯರ್‌ ಸೇಲ್ಸ್‌ ಮೆನೇಜರ್‌ ಅನಿಲ್‌ ಕುಮಾರ್‌, ಇನಿಶಿಯಲ್‌ ಕ್ವಾಲಿಟಿ ಸರ್ವೆ ಪ್ರಕಾರ ಹೋಂಡಾ ಕಂಪೆನಿ ಗುಣಮಟ್ಟದಲ್ಲಿ ಸತತ 11 ಬಾರಿ ಹಾಗೂ ಒಟ್ಟು 13 ಬಾರಿ ವಿಶ್ವದಲ್ಲಿಯೇ ನಂ. 1 ಸ್ಥಾನ ಗಳಿಸಿದೆ. ಜತೆಗೆ ಗ್ರಾಹಕರ ಸುರಕ್ಷೆ ಹಾಗೂ ಐಷಾರಾಮಿ ಅಭಿರುಚಿಗೆ ಅನುಗುಣವಾದ ಕಾರುಗಳನ್ನು ನೀಡುತ್ತಿದೆ ಎಂದರು.

ನೂತನ ಹೋಂಡಾ ಸಿಟಿ ಡೀಸೆಲ್‌ ಕಾರಿನಲ್ಲಿ 1.5 ಎಲ್‌ ಐ - ಡಿಟೆಕ್‌ ಡೀಸೆಲ್‌ ಎಂಜಿನ್‌ ಇದ್ದು, 26 ಕೆಎಂಪಿಎಲ್‌ ನೀಡುವುದರೊಂದಿಗೆ 6 ಸ್ಪೀಡ್‌ ಗೇರ್‌ ಬಾಕ್ಸ್‌ ಒಳಗೊಂಡಿದೆ ಹಾಗೂ ಪೆಟ್ರೋಲ್‌ ಕಾರ್‌ನಲ್ಲಿ ಐ - ವಿಟೆಕ್‌ ಸಿವಿಟಿ ಎಂಜಿನ್‌ ಇದ್ದು, 18 ಕೆಎಂಪಿಎಲ್‌ ನೀಡುತ್ತದೆ. ನೂತನ ಹೋಂಡಾ ಸಿಟಿ ಕಾರು ಅಂತಾರಾಷ್ಟ್ರೀಯ ಗುಣಮಟ್ಟದ ಸೆಡಾನ್‌ ಕಾರಾಗಿದ್ದು, ಶಾರ್ಕ್‌ ಫಿನ್‌ ಆ್ಯಂಟೆನಾ, ಡಿಜಿಟಲ್‌ ಕ್ಲೈಮೇಟ್‌ ಕಂಟ್ರೋಲ್‌ ಟಚ್‌ ಪೆನಲ್‌ ಎ.ಸಿ., ಎಲೆಕ್ಟ್ರಾನಿಕ್‌ ಸನ್‌ರೂಫ್‌ ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ ಎಂದು ಅವರು ತಿಳಿಸಿದರು.

ಅಡ್ಮಿನಿಸ್ಟ್ರೇಟಿವ್‌ ಮೆನೇಜರ್‌ ಜಾಕ್ಸನ್‌, ಸೇಲ್ಸ್‌ ಕ್ವಾಲಿಟಿ ಮೆನೇಜರ್‌ ಮೆಲ್ವಿನ್‌ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com