ಆಟದ ಮೆದಾನಕ್ಕೆ ಪ್ರಾಶಸ್ತ್ಯ ನೀಡಿ: ಸಚಿವ ಕಿಮ್ಮನೆ

ಕುಂದಾಪುರ: ರಾಜ್ಯದಲ್ಲಿ 50 ಸಾವಿರ ಶಾಲೆಗಳಿದ್ದು ಬಹುತೇಕ ಶಾಲೆಗಳಲ್ಲಿ ಆಟದ ಮೆದಾನದ ಕೊರತೆಯಿದೆ. ಆಟದ ಮೆದಾನ ಇಲ್ಲದ ಶಾಲೆ ಪರಿಪೂರ್ಣತೆ ಸಾಸಲು ಸಾಧ್ಯವಿಲ್ಲ. ಪಠ್ಯದ ಜತೆಗೆ ಕ್ರೀಡೆಗೂ ಅವಕಾಶ ಕಲ್ಪಿಸಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಪ್ರತಿಯೊಂದು ಶಾಲೆಗೂ ಆಟದ ಮೆದಾನ ಒದಗಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಸೋಮವಾರ ಸಂಜೆ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮೌಲ್ಯ, ಸಂಸ್ಕೃತಿ, ಕಾನೂನು ಇವ್ಯಾವೂ ಕೂಡ ಆಕಾಶದಿಂದ ಕೆಳಗಿಳಿದು ಬಂದಿಲ್ಲ. ನಾವೆ ನಿರ್ಮಿಸಿಕೊಂಡಿರುವಂತಹದ್ದು. ಮಕ್ಕಳಿಗೆ ಆದರ್ಶ ಜೀವನದ ಪಾಠ ಹೇಳುವಲ್ಲಿ ನಾವು ಎಡವಿದ್ದೇವೆ. ದೇಶದ ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳಲ್ಲಿ ಆದರ್ಶಯುತ ಬದುಕು ನಡೆಸಿದವರ ಚಿತ್ರಣ ಮುಂದಿಡಬೇಕು. ಮಸೀದಿ, ಮಂದಿರಕ್ಕಿಂತ ಮಿಗಿಲಾದುದು ವಿದ್ಯಾದೇಗುಲ. ನಾಲ್ಕು ಗೋಡೆಯ ನಡುವೆ ಅಕ್ಷರ ಜ್ಞಾನ ಸಂಪಾದಿಸುವ ಮಕ್ಕಳು ಮುಂದೆ ಪ್ರಜ್ಞಾವಂತ ನಾಗರಿಕರಾಗಿ ಮೂಡಿಬರುವುದು ಇಲ್ಲಿಂದಲೇ. ಶಾಲೆಯನ್ನು ದೇಗುಲವೆಂದು ಪೂಜಿಸಿ ಎಂದು ಅವರು ಹೇಳಿದರು. 

ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ, ಕ್ಷೇತ್ರ ಶಿಕ್ಷಣಾಕಾರಿ ಗೋಪಾಲ ಶೆಟ್ಟಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೇಯಾನ್, ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ದಿನಕರ ಶೆಟ್ಟಿ, ಜಯಕರ ಶೆಟ್ಟಿ, ಡಾ.ಸುರೇಶ್ ಶೆಟ್ಟಿ, ಜಯರಾಜ್ ಹೆಗ್ಡೆ, ಸೀತಾರಾಮ ಶೆಟ್ಟಿ, ಡಾ.ಕರುಣಾಕರ ಶೆಟ್ಟಿ, ಪ್ರಿನ್ಸಿಪಾಲ್ ನಾಗರತ್ನ ಪಾಲನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿವಾನಿ ಸ್ವಾಗತಿಸಿದರು. ಸ್ವರೂಪ್ ಅತಿಥಿಗಳನ್ನು ಪರಿಚಯಿಸಿದರು. ಅದ್ನಾನ್ ಮತ್ತು ಅನ್ಯನ್ಯ ಕಾರ್ಯಕ್ರಮ ನಿರ್ವಹಿಸಿದರು. ಸಫಾ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com