ಅಭಯಾರಣ್ಯದಲ್ಲಿ ಆನೆಗಾಗಿ ಹುಡುಕಾಟ; ದೊರೆಯದ ಸುಳಿವು

ಕುಂದಾಪುರ: ನಕ್ಸಲ್‌ ಪೀಡಿತ ತೊಂಬಟ್ಟು ಗ್ರಾಮದ ಭಟ್ರಸಾಲು ಬಳಿ ರಾತ್ರಿ ದಾಳಿ ನಡೆಸಿದ ಒಂಟಿಸಲಗವನ್ನು ಹುಡುಕುತ್ತಾ ಸಾಗಿದ ಅರಣ್ಯ ಅಧಿಕಾರಿಗಳಿಗೆ ಈ ತನಕ ಯಾವುದೇ ಸುಳಿವು ಲಭ್ಯವಾಗಿಲ್ಲ.

ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳು ನಾಲ್ಕು ತಂಡಗಳಾಗಿ ಸೋಮವಾರ ಬೆಳಗ್ಗಿನಿಂದಲೇ ತೊಂಬಟ್ಟು, ಕೊರ್ತುಗುಂಡಿ, ಕಬ್ಬಿನಾಲೆ, ಕೆಲಾ ಮುಂತಾದ ಭಾಗಗಳಲ್ಲಿ ಬಿರುಸಿನ ಶೋಧ ಕಾರ್ಯ ಮುಂದುವರಿಸಿದರು.

ಮಂಗಳವಾರವೂ ಜಡ್ಡಿನಗದ್ದೆ, ಕೆಲಾ, ಕೊರ್ತುಗುಂಡಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಶೋಧ ಕಾರ್ಯ ನಡೆಸಲಾಯಿತು. ಆದರೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಆನೆ ದಾಳಿ ನಡೆಸಿದ ಅನಂತರ ಪಶ್ಚಿಮ ಘಟ್ಟ, ಆಗುಂಬೆ ಪರಿಸರದತ್ತ ಸಾಗಿರಬೇಕು ಎಂದು ಶಂಕೆ ವ್ಯಕ್ತವಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com