ರೈಲಿನಲ್ಲಿ ಒಂಟಿ ಹಿರಿಯ ಪ್ರಯಾಣಿಕರಿಗೆ ಟಿಕೆಟ್‌ ಸೌಲಭ್ಯ

ಉಡುಪಿ: ಪುರುಷರಿಗೆ 60 ವರ್ಷ, ಮಹಿಳೆಯರಿಗೆ 45 ವರ್ಷ ಮೇಲ್ಪಟ್ಟರೆ ಅವರಿಗೆ ರೈಲಿನಲ್ಲಿ ಟಿಕೆಟ್‌ ನೀಡಲು ವಿಶೇಷ ಆದ್ಯತೆ ನೀಡಲಾಗುತ್ತದೆ.

'ಲೋವರ್‌ ಕೋಟಾ' ಎಂಬ ಸವಲತ್ತನ್ನು ರೈಲ್ವೇ ಮಂಜೂರು ಮಾಡಿದೆ. ಪುರುಷರು, ಮಹಿಳೆಯರು ಒಬ್ಬಂಟಿಯಾಗಿ ಪ್ರಯಾಣಿಸುವ ಸಂದರ್ಭ ಅವರು ಈ ಕೋಟಾದಡಿ ಸುಲಭವಾಗಿ ಟಿಕೆಟ್‌ ಪಡೆಯಬಹುದು. ಟಿಕೆಟ್‌ ಬುಕ್ಕಿಂಗ್‌ ನಮೂನೆಯಲ್ಲಿ ಒಂದೇ ಹೆಸರು ಇರಬೇಕು. 60 ವರ್ಷ ಮೇಲ್ಪಟ್ಟ ಪುರುಷರಿಗೆ ಹಿರಿಯ ನಾಗರಿಕರಿಗೆ ಇರುವ ಶೇ. 40 ರಿಯಾಯಿತಿ ಸಿಗುತ್ತದೆ. ಮಹಿಳೆಯರಿಗೆ 45 ವರ್ಷವಾದರೆ ರಿಯಾಯಿತಿ ಇರುವುದಿಲ್ಲ. ಟಿಕೆಟ್‌ ಕೋಟಾ ಸೌಲಭ್ಯ ಸಿಗುತ್ತದೆ. ಮಹಿಳೆಯರಿಗೆ 58 ವರ್ಷವಾದರೆ ಶೇ. 50 ರಿಯಾಯಿತಿ ಮತ್ತು ಆದ್ಯತೆಯ ಟಿಕೆಟ್‌ ಸಿಗುತ್ತದೆ ಎಂದು ರೈಲ್ವೇ ಯಾತ್ರೀ ಸಂಘದ ಅಧ್ಯಕ್ಷ ಆರ್‌.ಎಲ್‌. ಡಾಯಸ್‌ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com