ಯಶೋದಾ ಅವರಿಗೆ ಪಿಎಚ್‍ಡಿ

ಮರವಂತೆ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಯಶೊದಾ ಕರನಿಂಗ ಅವರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ. ಹುಬ್ಬಳ್ಳಿಯ ನೆಹರು ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಜುಬೇದಾ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಅವರು ಪ್ರಸ್ತುತ ಪಡಿಸಿದ 'ಮೃಣಾಲ್ ಪಾಂಡೇಜೀ ಕೆ ಉಪನ್ಯಾಸೋಮೆ ನಾರಿ ಚೇತನಾ ಕೆ ವಿವಿಧ್ ರೂಪ್' ಎಂಬ ಪ್ರೌಢ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ. ಜನವರಿ 5ರಂದು ಪಾಂಡಿಚೇರಿಯಲ್ಲಿ ನಡೆದ ಪ್ರಚಾರ ಸಭಾದ 76ನೆಯ ಘಟಿಕೋತ್ಸವದಲ್ಲಿ ಅವರು ಪದವಿ ಸ್ವೀಕರಿಸಿದರು. 
       ಯಶೋದಾ ಅವರು ಶಿರಸಿಯ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆಂಪರಾಜ ಕರನಿಂಗ ಮತ್ತು  ಸುಶೀಲಾ ದಂಪತಿಯ ಪುತ್ರಿ. ಎರಡು ವರ್ಷಗಳಿಂದ ಅವರು ಮರವಂತೆಯಲ್ಲಿ ಸೇವೆ 
ಸಲ್ಲಿಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com