ಪ್ರಾಂಶುಪಾಲೆ ಕೆ.ಸರಸ್ವತಿ ರಾವ್ ಗೆ ಸನ್ಮಾನ

 ಗಂಗೊಳ್ಳಿ: ನಿವೃತ್ತಿ ಎನ್ನುವುದು ವಯಸ್ಸಿಗೆ ಆಗಬೇಕೆ ಹೊರತು ಮನಸ್ಸಿಗೆ ಆಗಬಾರದು. ಸದಾಕಾಲ ಸೃಜನಶೀಲ ಕ್ರಿಯಾಶೀಲ  ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಅ0ತಹ ಮನಸ್ಸನ್ನು ವ್ಯಕ್ತಿತ್ವವನ್ನು ಎನ್ ಎಸ್ ಎಸ್ ಖಂಡಿತಾ ಎಲ್ಲರಿಗೂ ಕಲಿಸಿಕೊಡುತ್ತದೆ. ಎಂದು ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಸರಸ್ವತಿ ರಾವ್ ಹೇಳಿದರು. ಅವರು  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ತಮ್ಮ ಸೇವಾ ನಿವೃತ್ತಿಯ ಸಂದರ್ಭದಲ್ಲಿ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕಾಲೇಜು ಹಾಗು ರಾಷ್ಟ್ರೀಯ ಸೇವಾ ಯೋಜನೆಯ ಜೊತೆಗಿನ ಕಳೆದ ಹಲವಾರು ವರುಷಗಳ ತಮ್ಮ ಅನುಭವವನ್ನು ಹ0ಚಿಕೊ0ಡರು."
      "ಸ.ವಿ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಭಾಸ್ಕರ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ಎಕ್ಸೆಲೆ0ಟ್ ಕಾಲೇಜಿನ ಪ್ರಾ0ಶುಪಾಲೆ ಚಿತ್ರಾಕಾರಂತ  ನಿವೃತ್ತಿ ಹೊ0ದುತ್ತಿರುವ ಪ್ರಾ0ಶುಪಾಲರಿಗೆ ಶುಭಾಶಯಗಳನ್ನು ಕೋರಿದರು. ಉಪನ್ಯಾಸಕರಾದ ಆರ್.ಎನ್.ರೇವಣ್‍ಕರ್, ನಾರಾಯಣ್ ನಾಯ್ಕ್, ಸುಗುಣ ಆರ್, ವಿದ್ಯಾರ್ಥಿ ಪ್ರತಿನಿಧಿ ಪ್ರಣಯ್‍ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಮೇಘ ಶೇಟ್, ಪ್ರಗತಿ, ಪಲ್ಲವಿ,ಪ್ರಥ್ವಿ ಪ್ರಾರ್ಥಿಸಿದರು.ಶಶಿಕಲಾ  ಸ್ವಾಗತಿಸಿದರು. .ಸುಷ್ಮಾ ನಿರೂಪಿಸಿ .ಪವಿತ್ರಾ ವ0ದಿಸಿದರು.
ವರದಿ: ನರೇಂದ್ರ ಗಂಗೊಳ್ಳಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com